
News · July 3, 2026
ಪ್ರತಿಷ್ಠಿತ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ"ಗೆ ಶ್ರೀ ಕೋಟೆ ರಾಮ ಭಟ್ ಆಯ್ಕೆ
ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು .....
ಯಕ್ಷಗಾನ ಕಲಾರಂಗ (ರಿ.), ಉಡುಪಿ ವತಿಯಿಂದ ಪ್ರದಾನಗೊಳ್ಳುವ ಪ್ರತಿಷ್ಠಿತ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ"ಗೆ ಆಯ್ಕೆಯಾಗಿರುವ ಶ್ರೀ ಕೋಟೆ ರಾಮ ಭಟ್, ಕಾಸರಗೋಡು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತೆಂಕುತಿಟ್ಟಿನ ಹವ್ಯಾಸೀ ವೇಷಧಾರಿಯಾಗಿ, ನಿವೃತ್ತ ಕನ್ನಡ ಉಪನ್ಯಾಸಕರಾಗಿ, ಅರ್ಥಧಾರಿಯಾಗಿ, ಪುರಾಣ ವಾಚಕರಾಗಿ, ಲೇಖಕರಾಗಿ ಹಾಗೂ ಉತ್ತಮ ಭಾಷಣಕಾರರಾಗಿ ಸಮಾಜದಲ್ಲಿ ವಿಶಿಷ್ಟ ಮಾನ್ಯತೆ ಗಳಿಸಿರುವ ಶ್ರೀ ಕೋಟೆ ರಾಮ ಭಟ್ ಅವರು ಹಲವು ದಶಕಗಳಿಂದ ಸಾಹಿತ್ಯ, ಸಂಸ್ಕೃತಿ ಹಾಗೂ ಧಾರ್ಮಿಕ ಚಿಂತನೆಯ ಕ್ಷೇತ್ರಗಳಿಗೆ ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಜುಲೈ 11, 2026ರಂದು ಉಡುಪಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಗೌರವ ಲಭಿಸುತ್ತಿರುವುದು ಕರಾಡ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಪ್ರಶಸ್ತಿಯೂ ನಮ್ಮ ಸಮುದಾಯದ ವಿದ್ವಾಂಸರ ಹೆಸರಿನಲ್ಲಿ ನೀಡಲ್ಪಡುತ್ತಿರುವುದು ಇನ್ನೊಂದು ಅಭಿಮಾನಪೂರ್ವಕ ವಿಷಯ .
ಶ್ರೀ ಕೋಟೆ ರಾಮ ಭಟ್ ಅವರಿಗೆ ಆಯುರಾರೋಗ್ಯ ಹಾಗೂ ಇನ್ನಷ್ಟು ಸಮಾಜಮುಖಿ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆ ಸಲ್ಲಿಸುವ ಶಕ್ತಿ ದೊರೆಯಲಿ ಎಂದು ಹಾರೈಸುತ್ತಾ, ಪೆರ್ಲ ಕೃಷ್ಣ ಭಟ್ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕಾಗಿ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. 🌹


