Karada Vishwa

Event · July 1, 2025

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಕರ್ಕಾಟಕ ಮಾಸದ ದುರ್ಗಾಸೇವೆ

17-07-2025 ಗುರುವಾರದಿಂದ 28-07-2025 ಸೋಮವಾರದ ತನಕ

01.07.2025.

ನಮಸ್ಕಾರ🙏

ಭಕ್ತರ ಗಮನಕ್ಕೆ:

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಕರ್ಕಾಟಕ ಮಾಸದ ದುರ್ಗಾಸೇವೆಯು 17.07.2025 ಗುರುವಾರದಿಂದ 28.07.2025 ಸೋಮವಾರದ ತನಕ ನಡೆಯಲಿರುವುದು. ಈ 12 ದಿನಗಳ ಪರ್ಯಂತ ಇತರ ಸೇವೆಗಳ ಜೊತೆಗೆ ರಾತ್ರಿ ದೀಪಾರಾಧನೆ ಮತ್ತು ವಿಶೇಷ ದುರ್ಗಾಪೂಜೆಯು ನಡೆಯಲಿರುವುದು. ದೀಪಾರಾಧನೆ ದಿನಕ್ಕೆ ಒಂದರಂತೆ ಸೇವೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಬೇಕಾಗಿ ಕೋರಿಕೆ.

ಸೇವಾ ಶುಲ್ಕ :

ದೀಪಾರಾಧನೆ : ರೂ. 2800/-

ವಿಶೇಷ ದುರ್ಗಾ ಪೂಜೆ : ರೂ.150/-

ಗಮನಿಸಿ : ಈ ತಾರೀಕುಗಳಂದು ಈಗಾಗಲೇ ದೀಪಾರಾಧನಾ ಸೇವೆಗೆ ಹೆಸರು ನೋಂದಾವಣೆಯಾಗಿದೆ: 18.07.2025, 19.07.2025, 25.07.2025, 26.07.2025.

ಇತೀ,

ಆಡಳಿತ ಮಂಡಳಿ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಕರ್ಕಾಟಕ ಮಾಸದ ದುರ್ಗಾಸೇವೆ