Karada Vishwa

Article · October 13, 2026

ನವದುರ್ಗಾ ಭಜನಾ ಮಾಲಾ

By ಗಾಯತ್ರಿ ಕೆ ನಾಗರಾಜ ಅಡ್ಕತ್ತೊಟ್ಟಿ

ಗಾಯತ್ರಿ ಕೆ ಅಡ್ಕತೊಟ್ಟಿ

ಶೈಲ ಪುತ್ರಿಯಿಂದ ತೊಡಗಿ ನವ ದುರ್ಗೆಯರ ಕುರಿತು ನವರಾತ್ರಿಯ ಸಂದರ್ಭದಲ್ಲಿ ಆರಾಧಿಸುವ ದೇವಿಯ ಸ್ತುತಿ ಗೀತೆ


ಜಯ ಜಯ ದುರ್ಗಾ ಭವಾನಿ
ಜಯ ಜಯ ನವದುರ್ಗೆ
ಪಾಹಿ ಪಾಹಿ ಜಗಜನನಿ
ಪಾಹಿ ಪಾಹಿ ಮಾತೆ

ಶೈಲಪುತ್ರಿ

ಹಿಮವಂತನ ಮಗಳು ನೀನು
ವೃಷಭವಾಹಿನಿ ನೀನು
ಮೂಲಶಕ್ತಿಯ ರೂಪಿಣಿ
ಬಂದೆ ಭಕ್ತರ ಕಾಯಲು

ಬ್ರಹ್ಮಚಾರಿಣಿ

ತಪದಿ ನಿಂತ ತಾಪಸಿ ನೀನು
ಜಪಮಾಲೆ ಧರಿಸಿದವಳು
ಬ್ರಹ್ಮಜ್ಞಾನವ ತೋರುವವಳು
ಶಾಂತಿ ನೀಡುವ ತಾಯಿ

ಚಂದ್ರಘಂಟಾ

ಚಂದ್ರನಿಟ್ಟ ಹಣೆಯವಳು
ಘಂಟಾನಾದದ ದೇವಿ
ದಶಭುಜದಿ ಶಸ್ತ್ರ ಹಿಡಿದು
ದುಷ್ಟರ ಬೆದರಿಸಿದವಳು

ಕೂಷ್ಮಾಂಡಾ

ಮಂದಹಾಸದಿ ಜಗ ಸೃಜಿಸಿದವಳು
ಎಂಟು ಕೈಗಳ ದೇವಿ
ಸಿಂಹವೇರಿ ಬಂದವಳು ನೀನು
ಸೃಷ್ಟಿಯ ಬೀಜರೂಪಿಣಿ

ಸ್ಕಂದಮಾತಾ

ಸ್ಕಂದನ ಮಡಿಲಲಿಟ್ಟವಳು
ಕಮಲ ಹಿಡಿದ ಮಾತೆ
ವಾತ್ಸಲ್ಯದ ಸಾಗರ ನೀನು
ಮಮತೆಯ ತೋರುವವಳು

ಕಾತ್ಯಾಯನೀ

ಕಾತ್ಯಾಯನನ ಮಗಳೇ ನೀನು
ಮಹಿಷನ ಮರ್ದಿಸಿದವಳು
ಧರ್ಮವನುಳಿಸಲು ಬಂದ
ವೀರಾಧಿವೀರ ಮಾತೆ

ಕಾಲರಾತ್ರಿ

ಕರಾಳ ರೂಪಿನ ಕಾಲರಾತ್ರಿ
ಚದುರಿದ ಕೇಶದವಳು
ಭಕ್ತರ ಭಯವ ಕಳೆಯುವ
ಬೆಳಕಿನ ಜ್ವಾಲೆ ನೀನು

ಮಹಾಗೌರೀ

ಶ್ವೇತವಸ್ತ್ರದ ಗೌರಿಯೇ ನೀನು
ಗಂಗೆಯಂತೆ ಪಾವನಿ
ಪಾಪವ ತೊಳೆದು ಬಿಡುವವಳು
ಶುಭ್ರ ಮನದ ದೇವಿ

ಸಿದ್ಧಿದಾತ್ರೀ

ಕಮಲಾಸನದಿ ಕುಳಿತವಳು
ಸಿದ್ಧಿಯ ನೀಡುವವಳು
ಅಣಿಮಾದಿ ಸಿದ್ಧಿ ಕೊಡುವ
ಸರ್ವ ಫಲದ ಮಾತೆ

ಒಂಬತ್ತು ರೂಪ ಒಂದೇ ಶಕ್ತಿ
ಹಾಡಿಹೆ ನಾ ಭಕ್ತಿಯಲಿ
ಈ ಭಜನೆಯ ಹಾಡಿದ ಎಲ್ಲರಿಗೂ
ದುರ್ಗಾ ಮಾತೆ ಒಲಿಯಲಿ

Creative Writings