
News · September 24, 2026
ಪ್ರೊ. ಕೆ ಗಣಪತಿ ಭಟ್ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ
ಕರಾಡ ವಿಶ್ವದ ಅಭಿನಂದನೆಗಳು
ಕರಾಡ ಸಮಾಜದ ಹೆಮ್ಮೆಯ ವಿದ್ವಾಂಸರಾದ ಪ್ರೊ. ಕೆ. ಗಣಪತಿ ಭಟ್ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯದ ಕುಲಪತಿಗಳಾಗಿ (Vice-Chancellor) ನೇಮಕಗೊಂಡಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಚಾರ.
ಅದ್ವೈತ ವೇದಾಂತದ ಪ್ರಾಧ್ಯಾಪಕರಾಗಿ, ವೇದ–ಶಾಸ್ತ್ರಗಳ ಅಧ್ಯಯನ ಮತ್ತು ಬೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಗೆ ದೊರೆತಿರುವ ಈ ಮಹತ್ವದ ಜವಾಬ್ದಾರಿಯು ಅವರ ಪಾಂಡಿತ್ಯ ಹಾಗೂ ಸಾಧನೆಗೆ ಮತ್ತೊಂದು ಗೌರವದ ಗರಿ.
ಕರಾಡ ವಿಶ್ವದ ವತಿಯಿಂದ ಪ್ರೊ. ಕೆ. ಗಣಪತಿ ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
ತಮ್ಮ ನೇತೃತ್ವದಲ್ಲಿ ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯವು ಇನ್ನಷ್ಟು ಉನ್ನತಿಯನ್ನು ಸಾಧಿಸಲಿ ಎಂದು ಹಾರೈಸುತ್ತೇವೆ.

Achievers
