Karada Vishwa

Article · September 8, 2026

ಭಾಗ್ಯದ ಜ್ಯೋತಿ ತೋರಿಸು

By ರಾಧಾಕೃಷ್ಣ ಭಟ್;ಕುರುಮುಜ್ಜಿ

ರಾಧಾಕೃಷ್ಣ ಭಟ್ ಕುರುಮುಜ್ಜಿ

ಶಬರಿಮಲೆ ಯಾತ್ರೆ ಮತ್ತು ಸ್ವಾಮಿಸನ್ನಿಧಿಯನ್ನು ವರ್ಣಿಸಿ ಬರೆದ ಭಕ್ತಿಗೀತೆ. ಧಾಟಿ-ಭಾಗ್ಯದಲಕ್ಷ್ಮಿಬಾರಮ್ಮ!

ಭಾಗ್ಯದ ಜ್ಯೋತಿ ತೋರಿಸು....ನನ್ನಯ್ಯಸ್ವಾಮಿ
ಮಕರ ಜ್ಯೋತಿಯ ತೋರಿಸು ll ಭಾಗ್ಯದಜ್ಯೋತಿ ll

ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಕರಿಮಲೆ ಏರುತ ಸಾಗುತ ಇಳಿಯುತ
ಪಂಪಾನದಿಯಲಿಸ್ನಾನವ ಮುಗಿಸುತ
ಸನ್ನಿಧಿ ಸೇರಲು ಬರುವೆವು ನಾವು ll ಭಾಗ್ಯದಜ್ಯೋತಿ ll


ಕನಕನಿರ್ಮಿತ ಮೂರ್ತಿಯು ಸ್ವಾಮಿ
ಕಾನನವಾಸ ಕಲಿಯುಗವರದಾ
ಭಕ್ತಿಯಿಂದಲಿ ಕರೆಯುವೆವಯ್ಯ
ಸ್ವಾಮಿಯೆ ಶರಣಂಶರಣೆಂದು ll ಭಾಗ್ಯದಜ್ಯೋತಿ ll

ಸಂಖ್ಯೆಯಲ್ಲದು ಹದಿನೆಂಟು ಮೆಟ್ಟಲು
ಅವುಗಳನೇರುತ ಸನ್ನಿಧಿಸೇರಲು
ಸ್ವಾಮಿಯ ದರುಶನ ಭಾಗ್ಯವು ದೊರಕಿ
ಜನ್ಮ ಪಾವನ ಎಂದೆಂದೂ ll ಭಾಗ್ಯದಜ್ಯೋತಿ ll


ತುಪ್ಪಾಭಿಷೇಕದ ಹೊಳೆಯನು ಹರಿಸಿ
ಸನ್ನಿಧಿಯಲ್ಲಿ ಪೂಜೆಯ ವೇಳಗೆ
ಅಕ್ಕರೆ ತೋರುವ ಆ ಮಣಿಕಂಠನು
ಪಂದಳ ರಾಜನ ಕುಮಾರನು ll ಭಾಗ್ಯದಜ್ಯೋತಿ ll

ಅತ್ತಿತ್ತಗಲದ ಭಕ್ತಿಯ ಮನದಲಿ
ನಿತ್ಯೋತ್ಸಾಹದಿ ಶರಣಂ ಕರೆಯಲು
ನಿಷ್ಠೆಯ ತೋರುವ ಸ್ವಾಮಿಭಕ್ತರಿಗೆ
ಕಾಂತಮಲೆಯಲಿ ಕಾಣುವಜ್ಯೋತಿ ll ಭಾಗ್ಯದಜ್ಯೋತಿ ll





Creative Writings