
News · November 2, 2026
ಕರಾಡ ಬ್ರಾಹ್ಮಣ ಸಭಾ, ಮೈಸೂರು ವತಿಯಿಂದ ಕ್ರಿಕೆಟ್ ಪಂದ್ಯಾಟ
ಮೈಸೂರು: ಕರಾಡ ಬ್ರಾಹ್ಮಣ ಸಭಾ, ಮೈಸೂರು ವತಿಯಿಂದ ನವೆಂಬರ್ 1, 2026ರಂದು ವಿಜಯನಗರದ 3ನೇ ಹಂತದ ಗರುಡಾಚಾರ್ ಲೇಔಟ್‌ನ Matchbox ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆಯವರೆಗೆ ನಡೆದ ಪಂದ್ಯಾಟದಲ್ಲಿ ಕರಾಡ ಬಾಂಧವರು ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು. ವಿಜೇತ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಪಂದ್ಯಾಟಕ್ಕೆ ಕ್ರೀಡಾಂಗಣದ ವ್ಯವಸ್ಥೆ ಮಾಡಿಕೊಟ್ಟ ಶ್ರೀ ಗುರುರಾಜ್ ಅವರಿಗೆ ಹಾಗೂ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದ ಶ್ರೀ ಮಹೇಶ್ ಘಾಟೆ ಮತ್ತು ಸಹಕರಿಸಿದ ಎಲ್ಲಾ ಕರಾಡ ಬಾಂಧವರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಕರಾಡ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಕೃಷ್ಣಮೋಹನ ಐಲುಕುಂಜೆ, ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಭಟ್ ಆನೆಮಜಲು, ಸಹ ಕಾರ್ಯದರ್ಶಿ ಶ್ರೀ ನಾಗರಾಜ ಕಜಂಪಾಡಿ, ಕೋಶಾಧಿಕಾರಿ ಶ್ರೀಧರ ಭಟ್ ಪಾದೂರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿ ಪಂದ್ಯಾಟದ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದರು.
ಸಮಾಜದ ಬಾಂಧವರಲ್ಲಿ ಸ್ನೇಹ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಸೆಯುವ ಈ ಕ್ರೀಡಾಕೂಟವು ಯಶಸ್ವಿಯಾಗಿ ಸಂಪನ್ನಗೊಂಡಿತು











