Karada Vishwa

Article · November 21, 2026

ವಿರಹ ತಾಪ

ವೀಣಾ ಎಂ ಭಟ್

ತಂಗಾಳಿಗೆ ಮೈಯೊಡ್ಡಿ ಮಲಗಿರಲು ಮನದನ್ನೆ

ಸಿಂಗರಿಸಿ ನೀ ಬಳಿಗೆ ಬಂದಂಥ ಕನಸು

ಹೊಂಗನಸ ಸವಿಯನ್ನ ಹಂಚುವ ಬಯಕೆಯು

ಬಂಗಾರಿ ನೀ ಬರದೆ ನೊಂದಿದೆ ಮನಸು

ಹುಣ್ಣಿಮೆ ಚಂದಿರಗೆ ಸಾಗರ ಉಬ್ಬಿ ಬಂದಂತೆ

ತಣ್ಣಗೆ ಬೆಳದಿಂಗಳಲಿ ಓಡೋಡಿ ಬಂದೆ

ಕಣ್ಸನ್ನೆಯಲಿ ನಾ ಸನಿಹಕೆ ಕರೆದಾಗ

ಚಿಣ್ಣರ ಜತೆಗೂಡಿ ನನ್ನಿಂದ ಮರೆಯಾದೆ

ಇರುಳು ತಾರೆಯ ಗಡಣ ಆಗಸದೆ ಮೂಡಿರಲು

ಕೊರಳ ಮೇಲೆತ್ತಿ ನಾ ನನ್ನ ತಾರೆಯ ಅರಸಿ

ಮರುಳ ಯಾತಕೆ ಚಿಂತೆ ನೀ ಸ್ವಲ್ಪ ತೆಪ್ಪಗಿರು

ದುರುಳ ಮನವು ಮೆಲ್ಲ ಸವಿ ಮಾತನಾಡಿ

ಕರುಳು ಹಿಂಡಿತು ಬಿಡದೆ ನೆನಪಿನ ನೋವಿಂದ

ಮರಳಿ ಯತ್ನವ ಮಾಡು ನೀ ಹೇ ಮನವೇ

ಸುಳಿಯಲ್ಲಿ ಸಿಲುಕಿದೆನು ಬಿಡಿಸಲಾರದ ಕುಣಿಕೆ

ಅರಳುವುದೆ ಸುಮವು ನನ್ನ ಬಾಳಲ್ಲಿ ಹವಣಿಕೆ

Creative Writings