
Article · June 6, 2026
ಭಕ್ತಿಗೀತೆ
-- ಸಂಧ್ಯಾ ಕೊರೆಕ್ಕಾನ
ಮಂದಿರದೊಳಗಡೆ ಕುಳಿತಿಹ ದೇವಿಯ
ಚಂದದಿ ಭಜನೆಯ ಮಾಡೋಣ
ತರುತಿಹ ಸಿರಿಸಂಪದಗಳನೆಲ್ಲಾ
ಜಗದಲಿ ಎಲ್ಲರು ಹಂಚೋಣ
ಅನ್ನವ ನೀಡುವ ಭಾಗ್ಯದ ದೇವತೆ
ಬಾ ಬಾ ಎಂದು ಕರೆಯೋಣ
ಪಾವನ ದೇವಿಯ ದರುಶನದಿಂದ
ಮುಕ್ತಿಯ ಪಥವನು ಸೇರೋಣ
ಹಾಡುತ ನಲಿಯುತ ಸನ್ನಿಧಿಯೊಳಗಡೆ
ತೇರನ್ನೊಂದು ಎಳೆಯೋಣ
ದೇವಿಯ ಹೊತ್ತಿಹ ಪಲ್ಲಕಿ ನಮಿಸುತ
ಬೇಕಿಹ ವರಗಳ ಬೇಡೋಣ
ದೇವಿಯ ಸಹಸ್ರ ನಾಮವ ಹೇಳುತ
ಅವಳ ಅನುಗ್ರಹ ಪಡೆಯೋಣ
ಬಾಳಿಗೆ ದೀವಿಗೆ ತರುತಿಹ ದೇವಿಯ
ಭಕ್ತಿಲಿ ವಂದನೆ ಸಲಿಸೋಣ
Creative Writings
