Karada Vishwa

News · August 20, 2025

ಶ್ರೀ ಕೃಷ್ಣ ಭಟ್ ಚಾಂಗುಳಿ ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು 

ಹಿರಿಯ ಕೃಷಿಕ ಶ್ರೀ ಕೃಷ್ಣ ಭಟ್ ಚಾಂಗುಳಿ ಅವರಿಗೆ ಇತ್ತೀಚೆಗೆ ಬದಿಯಡ್ಕ ಪಂಚಾಯತ್ ವತಿಯಿಂದ “ಶ್ರೇಷ್ಠ ಹಿರಿಯ ಕೃಷಿಕ ಪ್ರಶಸ್ತಿ” ಲಭಿಸಿದೆ.


ನಮ್ಮ ಸಮಾಜದ ಹಿರಿಯ ಕೃಷಿಕ ಶ್ರೀ ಕೃಷ್ಣ ಭಟ್ ಚಾಂಗುಳಿ ಅವರಿಗೆ ಇತ್ತೀಚೆಗೆ ಬದಿಯಡ್ಕ ಪಂಚಾಯತ್ ವತಿಯಿಂದ “ಶ್ರೇಷ್ಠ ಹಿರಿಯ ಕೃಷಿಕ ಪ್ರಶಸ್ತಿ” ಲಭಿಸಿದೆ.
 
ಶ್ರೀಯುತರು ಕಾಸರಗೋಡಿನಲ್ಲಿ ಸಾಮಾನ್ಯವಾಗಿ ಬೆಳಿಯದ ಉದ್ದು, ಹುರುಳಿ, ಸಾಸಿವೆ, ಲವಂಗ ಇತ್ಯಾದಿ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಪ್ರತೀ ವರ್ಷ ಭತ್ತ, ಅರಸಿನ, ಹಸಿಮೆಣಸು, ಶುಂಠಿ ಮುಂತಾದ ಬೆಳೆಗಳನ್ನು ಕೂಡಾ ಬೆಳೆಯುತ್ತಾರೆ. ಇವರ ಕೃಷಿಯಲ್ಲಿನ ಶ್ರದ್ಧೆ, ಶ್ರಮ ಮತ್ತು ಅನುಭವಗಳಿಗೆ ಸಂದ ಗೌರವ - ಈ ಪ್ರಶಸ್ತಿ.

ಶ್ರೀ ಕೃಷ್ಣ ಭಟ್ ಅವರು ಅಗಲ್ಪಾಡಿ ದೇವಸ್ಥಾನದ ಮೊಕ್ತೇಸರರಲ್ಲಿ ಒಬ್ಬರು. ಹಾಗೆಯೇ ಅಗಲ್ಪಾಡಿ ಶಾಲೆಯಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 

 ಸಮಾಜದ ಹೆಮ್ಮೆಯಾದ ಶ್ರೀ ಕೃಷ್ಣ ಭಟ್ ಚಾಂಗುಳಿ ಅವರಿಗೆ ಕರಾಡ ವಿಶ್ವದಿಂದ ಹೃತ್ಪೂರ್ವಕ ಅಭಿನಂದನೆಗಳು.

Agriculture
ಶ್ರೀ ಕೃಷ್ಣ ಭಟ್ ಚಾಂಗುಳಿ ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು