Karada Vishwa

Article · November 12, 2026

ಕೃಷ್ಣನಿದ್ದ..

By ಜಯಶ್ರೀ ಕೆ. ಆರ್ ಭಟ್, ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಅಂದು ನಡೆಯಿತು ಮಹಾಭಾರತದ ಯುದ್ಧ /
ರಾಜ್ಯ ಕೊಡದೇ ದುರ್ಯೋಧನ ವಂಚಿಸಿದ್ದ /

ನ್ಯಾಯ ನೀತಿಗೆ ಯುಧಿಷ್ಟಿರನವನು ಬದ್ಧ /
ಧರ್ಮ ಉಳಿಸುವುದಕ್ಕೆ ಪಾಂಡವರು ಸಿದ್ಧ /

ರಾಜ್ಯಕಾಗಿ ನಡೆಯಿತಲ್ಲವೇ ಯುದ್ಧ
ದಾಯಾದಿಗಳ ನಡುವೆ ದ್ವೇಷವೆ ಪ್ರಬುದ್ಧ /

ಅಧರ್ಮ ಅಳಿಸಲಿಕೆ ಕೃಷ್ಣನೂ ಸಿದ್ಧ /
ಇಲ್ಲಿ ವೈರಿಯು ಸೋದರನೆ ಆಗಿದ್ದ /

ಉಭಯ ಸೇನೆಗಳು ಯುದ್ಧಕ್ಕೆ ಸನ್ನದ್ಧ
ಪಾಂಡರವರ ಪಕ್ಷದಲಿ ಕೃಷ್ಣನೇ ಇದ್ದ /

Creative Writings