Karada Vishwa

Article · August 17, 2026

ವಿಮಾನದ ಪೈಲೆಟ್ ಆಗೋದು ಹೇಗೆ ?

By ಪ್ರವೀಣ,ಪೊಸವಳ್ಯ ಬೆಲ್ಲ

ಪ್ರವೀಣ ಪಿ. ಬಿ.

ಬೆಂಗಳೂರಿನ "ಸರ್ಕಾರಿ ವೈಮಾನಿಕ ತರಬೇತಿ ಶಾಲೆ" ಮಾಹಿತಿ..

ಬಾಲ್ಯದಲ್ಲಿ ಮೂರು ಚಕ್ರದ ಸೈಕಲ್, ಪ್ರಾಥಮಿಕ ಶಾಲಾ ಹಂತದಲ್ಲಿ ಎರಡು ಚಕ್ರದ ಸೈಕಲ್, ಹೈಸ್ಕೂಲ್ ಬಂದಾಗ ಸ್ಕೂಟಿ /ಬೈಕ್ ಚಾಲನೆ, ಪಿ.ಯು ಕಾಲೇಜ್ ಹಂತದಲ್ಲಿ ಕಾರ್ ಚಾಲನೆ ಮಾಡೋ ಉತ್ಸಾಹ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಇರೋದು ಸಹಜ. ಕೇಂದ್ರ ಮೋಟಾರು ವಾಹನ ನಿಯಮಗಳ ಪ್ರಕಾರ ಪ್ರತಿ ವಾಹನಗಳನ್ನು ಚಲಾಯಿಸಲು ನಿರ್ದಿಷ್ಟ ವಯೋಮಾನ ನಿಗದಿಪಡಿಸಿರುವುದು ನಮಗೆಲ್ಲ ತಿಳಿದ ವಿಚಾರಗಳಾಗಿವೆ.
ಅದೇ ರೀತಿ ಇನ್ನೂ ಮುಂದಕ್ಕೆ ಹೋದಾಗ ಲೋಹದ ಹಕ್ಕಿಗಳು ಎಂದು ಕರೆಯಲ್ಪಡುವ "ವಿಮಾನಗಳನ್ನು" ಆಕಾಶದಲ್ಲಿ ಚಾಲನೆ ಮೂಲಕ ಹಾರಿಸಲು ಇರುವ ವ್ಯಕಿಯೇ ಪೈಲೆಟ್. ಇದಕ್ಕೂ ಕೂಡಾ Directorate General of Civil Aviation (DGCA)‌ ಸರ್ಕಾರದ ನಿಯಮಾವಳಿಗಳ ಮೂಲಕ ಲೈಸನ್ಸ್ ಪಡೆಯಲು ತರಬೇತಿ ನೀಡುವ ಕರ್ನಾಟಕ ಸರ್ಕಾರದ "ಬೆಂಗಳೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ" ಕಾರ್ಯ ನಿರ್ವಹಿಸುತ್ತಿದೆ. ಪೈಲೆಟ್ ತರಬೇತಿ ಶಾಲೆಯು ಬೆಂಗಳೂರಿನ ಜಕ್ಕೂರಿನಲ್ಲಿದ್ದು ರಾಜ್ಯದ ಆಸಕ್ತ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಪ್ರಾಯೋಗಿಕ ತರಬೇತಿ ನೀಡುತ್ತದೆ. ಒಂದು ವರ್ಷಕ್ಕೆ ನಿಗದಿ ಪಡಿಸಲಾದ ನಿಯಮಿತ ಸೀಟುಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯನ್ನು ನಿಗದಿ ಪಡಿಸುತ್ತದೆ. ಪ್ರತಿ ವರ್ಷ ಮೂರು ವಿಧದಲ್ಲಿ ವೈಮಾನಿಕ ಹಾರಾಟ ತರಬೇತಿಯನ್ನು ಈ ಕೆಳಗಿನ ವರ್ಗೀಕರಣದ ಮೂಲಕ ನೀಡಿ ಪೈಲೆಟ್ ಲೈಸನ್ಸ್ ಅರ್ಹ ಅಭ್ಯರ್ಥಿಗಳಿಗೆ ನೀಡುತ್ತದೆ.
SPL (Student Piolet Training)
PPL 1 YEAR Training (Private Piolet Training)
CPL 2 YEARS Training (Commercial Piolet Training)
Qualification : 12th PCM Pass

ಸ್ಟೂಡೆಂಟ್ ಪೈಲೆಟ್ ಲೈಸನ್ಸ್
ಪ್ರೈವೇಟ್ ಪೈಲೆಟ್ ಲೈಸನ್ಸ್
ಕಮರ್ಶಿಯಲ್ ಪೈಲೆಟ್ ಲೈಸನ್ಸ್

ಮೂರು ವಿಧಗಳಲ್ಲಿ ಹಂತ ಹಂತವಾಗಿ ೩೦೦ ಗಂಟೆಗಳ ಥಿಯರಿ ಮತ್ತು ಪ್ರಾಯೋಗಿಕ ೪೦+ ೨೦೦ ಗಂಟೆಗಳ ಹಾರಾಟದ ನಂತರ ನೀಡಲಾಗುತ್ತದೆ.ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪಾಸಾದ ೧೭+ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಇದು ಪ್ರಾಯೋಗಿಕ ತರಬೇತಿ ಅವಧಿಯಾಗಿದ್ದು ನಂತರ ಹಂತ ಹಂತವಾಗಿ ವೈಮಾನಿಕ ಕ್ಷೇತ್ರದಲ್ಲಿ ಕಲಿಕೆಗೆ ಅವಕಾಶವಿದೆ. ಈ ತರಬೇತಿಗೆ ಡಿ.ಜಿ.ಸಿ.ಎ ನಿಯಮಾವಳಿಗಳಂತೆ ಮೆಡಿಕಲ್ ಫಿಟ್ನೆಸ್, ಉತ್ತಮ ದೃಷ್ಟಿ ಪ್ರಮಾಣ ಪತ್ರ ಅತ್ಯಗತ್ಯ.

Creative WritingsEducation
ವಿಮಾನದ ಪೈಲೆಟ್ ಆಗೋದು ಹೇಗೆ ?