
Article · June 25, 2026
ಜನನದಿಂದ ಮರಣದವರೆಗೆ
✍🏻ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ
ಮನುಜ ನೀನು ಬಾಳಲೆಂದು
ಬೇಕು ಸ್ವಚ್ಛ ಪರಿಸರ |
ಉಸಿರಾಡಲು ಬೇಕೇ ಬೇಕು
ಆಮ್ಲಜನಕ ಸರಸರ II
ಸರಬರಾಜು ಮಾಡುತಿಹುದು
ಮರಗಳೆಂದು ತಿಳಿದುಕೋ |
ಮರಗಳನ್ನು ಕಡಿಯದೇನೆ
ದಟ್ಟವಾಗಿ ಬೆಳೆಸಿಕೋ||
ಪುಷ್ಪ ಪತ್ರ ಫಲಗಳೆಲ್ಲ
ನಿನಗೆ ಮಾತ್ರ ಅಲ್ಲವೋ |
ಹಂಚಿ ತಿನ್ನಬೇಕು ಇದನು
ಇತರ ಜೀವಕೆಲ್ಲವೂ||
ಜನನದಿಂದ ಮರಣವರೆಗೆ
ನೆರಳು ನೀಡೋ ಪರಿಸರ |
ಗಂಧ ನಿಡೋ ಪರಿಸರ
ಗಾಳಿ ನೀಡೋ ಪರಿಸರ Il
ಕಾಡು ಇದ್ದರೇನೆ ತಾನೆ
ಮಳೆಯು ಬೆಳೆಯು ಸಕಾಲಕೇ |
ಮರಳುಗಾಡಿನಲ್ಲಿ ಮಳೆಯು
ಬರದು, ಅರಿಯದೇತಕೆ? II
ನಿನ್ನ ಹಾಗೆ ಇತರ ಜೀವ-
-ರಾಶಿಗೆಲ್ಲ ಬದುಕಿದೇ |
ಅದನು ಹಾಳು ಮಾಡುವಂಥ
ಹಕ್ಕು ನಿನಗೆ ಎಲ್ಲಿದೇ? II
ಹಸಿರು ಇಲ್ಲದಿದ್ದ ಮೇಲೆ
ನಿನಗೆ ಉಸಿರು ಎಲ್ಲಿದೇ?|
ಜೋಕೆಯಿಂದ ಪರಿಸರವ
ಉಳಿಸಿ ಬೆಳೆಸಬೇಕಿದೆ II
ನಾಲ್ಕು ದಿನದ ಬದುಕು ಇಲ್ಲಿ
ದೇಹವಿದು ನಶ್ವರ |
ಗಡುವು ನೀಡಿ ಕಳುಹಿಸಿರುವ
ನಮ್ಮನಿಲ್ಲಿ ಈಶ್ವರ II
ನಮ್ಮ ಸರದಿ ಬರುವವರೆಗೆ
ಬೇಕು ಗಾಳಿ ವಿನಿಮಯ I
ಉಸಿರ ಪಡೆದು ಉಸಿರ ನೀಡಿ
ಸವೆಸು ಬಾಳು ಸುಖಮಯ II
☘️☘️☘️☘️☘️
Creative Writings
