Karada Vishwa

Article · August 23, 2026

ಮಹಿಳೆಯರು ಸುಲಲಿತವಾಗಿ ಡ್ರೈವ್ ಮಾಡಬಹುದಾದ ಕಾರ್ ಗಳು...

By ಪ್ರವೀಣ ಪೊಸವಳ್ಯ ಬೆಲ್ಲ.

ಪ್ರವೀಣ ಪೊಸವಳ್ಯ, ಬೆಲ್ಲ

ಅಟೊಗೇರ್ ಕಾರ್ ಗಳ ಮಾಹಿತಿ..(AGS Auto Gear shift ) (AMT Automated Manual Transmission )

ಪೇಟೆ ಪಟ್ಟಣ,ನಗರ ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆಗಳು,ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲಿಯೂ ಮಹಿಳೆಯರು ಕಾರ್ ಡ್ರೈವ್ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನರು ನಗರಗಳಿಗೆ ಉದ್ಯೋಗದ ನಿಮಿತ್ತ ಹೋಗುವುದರಿಂದಾಗಿ ಹಳ್ಳಿಗಳು ನಿಧಾನವಾಗಿ ಖಾಲಿಯಾಗುತ್ತಿವೆಯೇ ? ಎಂಬ ಪ್ರಶ್ನೆಯು ಮನಸ್ಸಿನಲ್ಲಿರುತ್ತದೆ.ಇಂದಿನ ಕೃಷಿ ಕುಟುಂಬಗಳಲ್ಲಿ ಎರಡೊ ಮೂರು ಮಂದಿ ಮನೆಯಲ್ಲಿರುವುದು ಸಾಮಾನ್ಯವಾಗಿದೆ. ಪ್ರತಿ ಸದಸ್ಯರು ಡ್ರೈವಿಂಗ್ ಕೌಶಲ್ಯವನ್ನು ಕಲಿತುಕೊಂಡಾಗ ಕೆಲಸ ಕಾರ್ಯಗಳು ಸುಲಭವಾಗುತ್ತವೆ. ಕುಟುಂಬದಲ್ಲಿ ಮಹಿಳೆಯರು ವಾಹನ ಚಾಲನೆ ಕಲಿತಾಗ ಇನ್ನಷ್ಟು ಸುಲಲಿತವಾಗುವುದರ ಜೊತೆಗೆ ಮಕ್ಕಳನ್ನು ಶಾಲೆಗೆ ಬಿಡೋದು, ಸಂಜೆ ಕರೆ ತರುವುದು, ಪೇಟೆಗೆ ಹೋಗಲು, ಸ್ಥಳೀಯ ಕಾರ್ಯಕ್ರಮಗಳಿಗೆ ಹೋಗಲು ಇಂತಹ ಕೌಶಲ್ಯಗಳು ಉಪಯೋಗವಾಗುತ್ತವೆ. ಅದೇ ರೀತಿ ಯಾವ ಕಾರುಗಳನ್ನು ಅತಿ ಸುಲಭವಾಗಿ ಡ್ರೈವ್ ಮಾಡಬಹುದು? ಇದಕ್ಕೆ ಪೂರಕವಾದ ಮಾಹಿತಿ ಇಲ್ಲಿದೆ.

ಮಹಿಳೆಯರಿಗೆ ಪೂರಕವಾಗಿರುವ ಅಟೊ ಗೇರ್ ಕಾರ್ ಗಳು:
ಸಾಮಾನ್ಯವಾಗಿ ಗೇರ್ ಮ್ಯಾನುವಲ್ ಶಿಫ್ಟ್ ಮಾಡುವ ಕಾರುಗಳು ಹಲವಾರು ವರ್ಷಗಳಿಂದ ಇವೆಯಾದರೂ ಸುಮಾರು ಎರಡು ದಶಕಗಳ ಹಿಂದೆ ಅಟೋ ಗೇರ್ ಕಾರ್ ಗಳು ಪ್ರಾರಂಭಗೊಂಡುವು. ಅಟೋ ಗೇರ್ ಕಾರ್ ತಂತ್ರಜ್ಞಾನವು ಎಲ್ಲಾ ವರ್ಗದ ಜನರಿಗೆ ಡ್ರೈವ್ ಮಾಡಲು ಸಹಕಾರಿಯಾಗಿದೆ.

ಡ್ರೈವಿಂಗ್ ನಲ್ಲಿ ಕೌಶಲ್ಯಕ್ಕೆ ಒತ್ತು ಮತ್ತು ಡಿಸಿಶನ್ ತೆಗೆದುಕೊಳ್ಳುವುದೇ ಪ್ರಮುಖ:
ಡ್ರೈವಿಂಗ್ ಕೌಶಲ್ಯ ವ್ಯವಸ್ಥೆಯಲ್ಲಿ ನಿರ್ಣಯವೇ ಪ್ರಮುಖ.ಒಬ್ಬಂಟಿಯಾಗಿ ಡ್ರೈವ್ ಮಾಡುವಾಗ ಸಲಹೆ ನೀಡಲು ಯಾರೂ ಇರೋದಿಲ್ಲ. ಅದ್ದರಿಂದ ಸ್ವಂತ ನಿರ್ಧಾರವನ್ನು ಫ್ರಾಕ್ಷನ್ ಆಫ್ ಸೆಕೆಂಡ್ ಗಳಲ್ಲಿ ತೆಗೆದುಕೊಳ್ಳುವುದು ಡ್ರೈವಿಂಗ್ ನಲ್ಲಿ ಅತಿ ಮುಖ್ಯ ಎನ್ನಬಹುದು. ಉದಾಹರಣೆಗೆ ಬ್ರೇಕ್ ಹಾಕುವುದು,ಓವರ್ ಟೇಕ್ ಮಾಡುವುದು,ಪಾದಚಾರಿಗಳು ರಸ್ತೆಗೆ ದಾಟುವಾಗ ವಾಹನವನ್ನು ನಿಧಾನವಾಗಿರುವಂತೆ ಗಮನ ಹರಿಸುವುದು,ತಿರುವುಗಳಲ್ಲಿ,ಕಡಿದಾದ ತಿರುವುಗಳಲ್ಲಿ, ಶಾಲಾ ವಠಾರದ ಮುಂಭಾಗದ ರಸ್ತೆಗಳಲ್ಲಿ ಡ್ರೈವಿಂಗ್ ನ ವೇಗ ನಿರ್ಣಯವೇ ಪ್ರಮುಖವಾದ ಅಂಶಗಳಾಗಿವೆ.

ಅಟೋ ಗೇರ್ ಕಾರ್ ನಲ್ಲಿ ಏನೇನು ಗಮನಿಸಬೇಕು:

ಅಟೋ ಗೇರ್ ಕಾರಿನಲ್ಲಿ ಕ್ಲಚ್ ಪೆಡಲ್ ಇರುವುದಿಲ್ಲ ಎಂದು ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.ವಾಹನದ ಇಂಜಿನ್ ಆರ್.ಪಿ.ಯಮ್. (ರೊಟೇಶನ್ ಪರ್ ಮಿನಿಟ್) ಅನುಗುಣವಾಗಿ ಮತ್ತು ಕಾರಿನ ವೇಗವನ್ನು ಆಧರಿಸಿ ಕಾರ್ ನ ಗೇರ್ ಗಳು ಸ್ವಯಂ ಚಾಲಿತವಾಗಿ ಬದಲಾಗಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ /ಯಲ್ .ಸಿ.ಡಿ. ಮೂಲಕ ಡ್ರೈವರ್ ಗೆ ಯಾವ ಗೇರ್ ನಲ್ಲಿದೆ ಅಂತ ಸೂಚಿಸುತ್ತದೆ.ಈ ಕಾರಿನಲ್ಲಿ ಬ್ರೇಕ್ ಮತ್ತು ಎಕ್ಸಲೇಟರ್ ಎರಡು ಪೆಡಲ್ ಗಳು ಮಾತ್ರಾ ಇರುತ್ತದೆ.ಇದರಿಂದಾಗಿ ಗೇರ್ ಬದಲಾಯಿಸುವ ಯಾವುದೇ ಗೊಂದಲವಿಲ್ಲ.ಅದೇ ರೀತಿ ಏರು ರಸ್ತೆಯಲ್ಲಿ ನಿಂತಾಗ ಪುನಃ ಚಾಲನೆ ಮಾಡುವಾಗ ಹಿಂದೆ ಚಲಿಸುವ ಗೊಂದಲ ಈ ಕಾರಿನಲ್ಲಿ ಕಡಿಮೆಯಾಗಿರುತ್ತದೆ.

ಗೇರ್ ಲೆಸ್ ಕಾರಿನಲ್ಲಿ ಏನೆಲ್ಲ ಗಮನಿಸಬೇಕು :

ಕಾರ್ ಸ್ಟಾರ್ಟ್ ಮಾಡುವ ಮೊದಲು ಹ್ಯಾಂಡ್ ಬ್ರೇಕ್ ಹಾಕಿ ಅಟೋ ಗೇರ್ ಸ್ವಿಚ್ ಅಥವಾ ಗೇರ್ ಲಿವರನ್ನು ನ್ಯೂಟ್ರಲ್ ಗೆ ಇರುವಂತೆ ಮಾಡಿ ಬ್ರೇಕ್ ಪೆಡಲ್ ಒತ್ತಿ ಸ್ಟಾರ್ಟ್ ಮಾಡಿ ಗೇರ್ ಸ್ವಿಚ್ ಅನ್ನು ಅಟೋ ಗೆ ಇಟ್ಟು ನಿಧಾನವಾಗಿ ಎಕ್ಸಲೇಟರ್ ನೀಡಿದಾಗ ಕಾರ್ ಚಾಲನೆಯಾಗುತ್ತದೆ.ಅದೇ ರೀತಿ ಮುಂದುವರಿದಾಗ ಅಟೋಗೇರ್ ಸ್ವಯಂಚಾಲಿತವಾಗಿ ಬದಲಾಗಿ ಕಾರು ಮುಂದಕ್ಕೆ ಹೋಗುತ್ತದೆ.ಇದರಲ್ಲಿ ಒಂದರಿಂದ ಐದರವರೆಗೆ ಗೇರ್ ಗಳು ಇದ್ದು ಎಲ್ಲಾ ಗೇರ್ ಗಳು ಸ್ವಯಂಚಾಲಿತಗೊಳ್ಳುತ್ತವೆ.ಅದೇ ರೀತಿ ಕಾರಿನ ವೇಗ ನಿಧಾನವಾದಾಗ ಐದರಿಂದ ಒಂದರ ಕಡೆಗೆ ಸ್ವಯಂಚಾಲಿತವಾಗಿ ಬದಲಾಗುತ್ತದೆ.ವಾಹನ ಹಿಂದಕ್ಕೆ ಚಲಿಸಲು ಮಾತ್ರ ರಿವರ್ಸ್ ಸ್ವಿಚ್ ಅನ್ನು ಮ್ಯಾನುವಲ್ ಆಗಿ ಹಾಕಬೇಕಾಗುತ್ತದೆ.

ಅಟೋ ಗೇರ್ ನಲ್ಲಿ ಮ್ಯಾನುವಲ್ ವ್ಯವಸ್ಥೆ ಇದೆಯೇ ?:
ಅಟೋ ಗೇರ್ ಕಾರ್ ಗಳಲ್ಲಿ ಮ್ಯಾನುಅಲ್ ಗೇರ್ ಹಾಕಲು ವ್ಯವಸ್ಥೆ ಇದ್ದು ಇದಕ್ಕೆ ಕ್ಲಚ್ ಅವಶ್ಯಕತೆ ಇರುವುದಿಲ್ಲ. ಗೇರ್ ಮ್ಯಾನುವಲ್ ಹಾಕಲು ಕಲಿತಲ್ಲಿ ಗೇರ್ ಹಾಕಿ ಕೊಂಡು ಡ್ರೈವ್ ಮಾಡಬಹುದು.

AMT Automated Manual Transmission
ಅಟೋ ಗೇರ್ ಶಿಫ್ಟ್ ತಂತ್ರ ಜ್ಞಾನದ ಮೂಲಕ ಅಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಮೂಲಕ ಈ ಕಾರ್ ಗಳು ಚಾಲನೆಗೊಳ್ಳುತ್ತವೆ.

ಮಹಿಳೆಯಯರಿಗೆ ಪೂರಕ ಯಾಕೆ:
ಇತ್ತೀಚಿನ ವರುಷಗಳಲ್ಲಿ ಮಹಿಳೆಯರು ಮ್ಯಾನುವಲ್ ಗೇರ್ ಇರುವ ಕಾರ್ ಗಳನ್ನು ಡ್ರೈವ್ ಮಾಡುತ್ತಿದ್ದರೂ ಅಟೋ ಗೇರ್ ಕಾರ್ ಗಳಲ್ಲಿ ಡ್ರೈವ್ ಮಾಡಲು ಅತಿ ಸುಲಭವಾಗಿರುವುದರಿಂದ ಇದನ್ನೇ ಇಷ್ಟ ಪಡುತ್ತಿದ್ದಾರೆ ಮಾತ್ರವಲ್ಲ ಇದರಲ್ಲಿ ಪದೇ ಪದೇ ಗೇರ್ ಬದಲಾಯಿಸುವ ಒತ್ತಡವಿಲ್ಲ ಎಂಬುದು ಇದರ ಮೇಲೆ ಒಲವು ತೋರಿಸಲು ಕಾರಣವಾಗಿದೆ.

ಮಧ್ಯಮ ವರ್ಗದ ಕುಟುಂಬಗಳಿಗೆ ಪೂರಕವಾದ ಕಾರುಗಳು:
ಮಾರುತಿಗಳಲ್ಲಿ ಯಸ್.ಪ್ರೆಸ್ಸೊ,ಸೆಲೆರಿಯೋ,ವ್ಯಾಗನ್ ಆರ್,ಮುಂತಾದ ಕಾರುಗಳು ಅಟೋ ಗೇರ್ ನಲ್ಲಿ ಸಣ್ಣ ಕುಟುಂಬಗಳಿಗೆ ಅದೇ ರೀತಿ ಮಹಿಳೆಯರಿಗೆ ಡ್ರೈವ್ ಮಾಡಲು ಅತಿ ಸುಲಭವಾಗಿದೆ.ಮಾತ್ರವಲ್ಲ ಕನಿಷ್ಟ ಒಂದು ತಿಂಗಳೊಳಗೆ ಪ್ರಾರಂಭದಿಂದ ಕಲಿತು ಡ್ರೈವ್ ಮಾಡಬಹುದು.ಹೊಸ ಕಾರು ಗಳು ೬ ರಿಂದ ೮ ಲಕ್ಷದ ಮೊತ್ತದಲ್ಲಿ ಸಿಗುವುದಾದರೆ ಸೆಕೆಂಡ್ ಹ್ಯಾಂಡ್ ಕಾರುಗಳು ೩ ರಿಂದ ೪ ಲಕ್ಷದ ಬಜೆಟ್ ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.ಇಂಧನ ದಕ್ಷತೆ ಹೇಳುವುದಾದರೆ ಪ್ರತಿ ಲೀಟರೀಗೆ ೧೬ - ೨೦ ಇರುತ್ತದೆ.
ಕೃಷಿ,ಮಧ್ಯಮ ವರ್ಗದ ಕುಟುಂಬಗಳಿಗೆ ಅಟೋ ಗೇರ್ ಕಾರ್ ಗಳು ಪ್ರಯಾಣಕ್ಕೆ ಅನುಕೂಲವೆನ್ನಬಹುದು.

ಪ್ರವೀಣ. ಪೊಸವಳ್ಯ ಬೆಲ್ಲ.
9449448912

Creative Writings
ಮಹಿಳೆಯರು ಸುಲಲಿತವಾಗಿ ಡ್ರೈವ್ ಮಾಡಬಹುದಾದ ಕಾರ್ ಗಳು...