
Article · October 11, 2026
ಅಗಲ್ಪಾಡಿ ದುರ್ಗೆ
ಸಂಧ್ಯಾ ಕೊರೆಕ್ಕಾನ
ಶ್ರೀದುರ್ಗೆ ಬಂದಳು ಅಗಲ್ಪಾಡಿಗೆ
ಭಕ್ತ ಜನ ನಿಂತರು ಅವಳ ಸೇವೆಗೆ
ಚಂದ್ರಕಾಂತಿ ಶೋಭಿತೆ ಶಾಂತರೂಪಿಣಿ
ಶೈಲಪುತ್ರಿ ವಿಶಾಲಾಕ್ಷಿ ಮಂದಹಾಸಿನಿ
ಕೋಟಿಸೂರ್ಯಪ್ರಭೆಯಂತೆ ಕಂಗೊಳಿಸುವೆ
ಭಕ್ತಪರಾಧೀನಳಾಗಿ ನೀ ನೆಲೆಸಿಹೆ
ಅನ್ನದಾನ ಮಾಡುತಿಹೆ ನೀ ಪರಶಿವೆ
ಶಂಖ ಭೇರಿ ವೇದ ಪಠಣ ಇಲ್ಲಿ ಮೊಳಗಿವೆ
ಚರಣಕಮಲಗಳಿಗೆ ಎರಗಿ ನಿನ್ನಪೂಜಿಸಿ
ಇತ್ತ ಬೆಲ್ಲದನ್ನ ಬಂದು ನೀನು ಸೇವಿಸಿ
ಜಗಜ್ಜನನಿ ಅಗಲ್ಪಾಡಿ ಪರಮೇಶ್ವರಿಯು
ತಾವರೆ ಕಣ್ಣುಳ್ಳ ಸೌಭಾಗ್ಯದ ನಿಧಿಯು
Creative Writings
