Karada Vishwa

Article · October 31, 2026

ಮಾಯಾ ಚಾದರ..

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಕಾಲದ ಸುಳಿಯೊಳು ಸಿಲುಕಿದೆ ಮೇದಿನಿ
ಮಾಯೆಯು ಚಾದರ ಹಾಸಿಹುದು/

ನಾಳೆಗಳೆನ್ನುವ ನಾಳೆಗಳೂ ಸಹ
ಕ್ಷಣಗಳೊಳಗೆ ಕಳೆದ್ಹೋಗುವುದು /

ತಣ್ಣನೆ ಗಾಳೀ ಸುಂದರ ಪ್ರಕೃತೀ
ಹೃನ್ಮನ ಸೆಳೆಯುವ ಶೃಂಗಾರ /

ಕಾಲನ ಮುಂದೇ ಏನೇನಿಲ್ಲಾ
ಎಲ್ಲವು ಕಾಗೆ ಬಂಗಾರ/

ದೇವನು ತಿರುಗಿಸೊ ಆಟದ ಬುಗರಿ
ಎಲ್ಲವು ಸುಂದರ ಕಣ್ಣಳಿಗೇ /

ಸೃಷ್ಟಿ ರಹಸ್ಯವು ಅಡಗಿರುವಂತಹ
ಬಾಳಿನ ಈ ಸಾಗರದೊಳಗೇ /

ಕ್ಷಣ ಕ್ಷಣಕೂ ತೆರೆಯುವ ಹೊಸ ಲೋಕ
ವಿಸ್ಮಯದಾಗರ ಜಗದೊಳಗೆ /

ಏನೇ ಇರಲಿ, ಹೇಗೇ ಇರಲಿ,
ಎಲ್ಲವು ಅವನಾ ಮಡಿಲೊಳಗೆ /

ಕೈಯೊಳು ಹಿಡಿದು ಆಡಿಸುತಿರುವಾ,
ಎಲ್ಲವು ಅವನಾ ಮುಷ್ಟಿಯೊಳು /

ಏನೇನಿಹುದೂ ಏನೇನಿಲ್ಲಾ,
ಎಣಿಸಲಸಾಧ್ಯವು ಸೃಷ್ಟಿಯೊಳು /

ನೋವೂ, ನಲಿವೂ, ಏಳೂ,ಬೀಳೂ,
ಎಲ್ಲವು ಸಹಜಾ ಸೃಷ್ಟಿಯೊಳು,

ದೇವನ ಕರುಣಾ ದೃಷ್ಟಿಯು ಇದ್ದರೆ
ಬಾಳಬಹುದು ಸಂತುಷ್ಟಿಯೊಳು /

Creative Writings