
Article · March 21, 2026
ನೀ ಬರುವೆಯಾ ..?
- ಅಶೋಕ ಮುಂಡಕಾನ
ಸಂಜೆ ಹೊತ್ತನು ಕಳೆಯ ಬಯಸಿಹೆ
ನೀನು ನನ್ನೆಡೆ ಬರುವೆಯಾ
ಖುಷಿಯ ಕ್ಷಣಗಳ ಸವಿಯುವಲ್ಲಿ
ನನ್ನ ಜೊತೆಯಾಗಿರುವೆಯಾ
ಅರಿತು ಬೆರೆತು ನೋವ ಮರೆಯುವ
ಮುಕ್ತ ಮನಗಳು ನುಡಿಯಲಿ
ಒಲವು ಬೆಳೆಯಲಿ ಗೆಲುವು ತುಂಬಲಿ
ನುಡಿಗಳಾಚೆಯ ನಭದಲಿ
ಮತ್ತೆ ಮರುದಿನ ಸೇರಿ ನುಡಿಯುವ
ದಿನದ ಸಂಕಟ ಮರೆಯಲಿ
ಅರಿತು ಬೆರೆತ ಕ್ಷಣದ ಬೆಳಕಲಿ
ಹೃದಯ ಗೆಲುವಲಿ ನುಲಿಯಲಿ
ದಿನಗಳೆಲ್ಲವು ಹೀಗೆ ಕಳೆಯಲಿ
ನಿನ್ನ ಜೊತೆಗಿಹ ಖುಷಿಯಲಿ
ದಿನವು ವರುಷವು ಯುಗಗಳಾಗಲಿ
ಬೆರೆತ ಹೃದಯಗಳರಲಿ
Creative Writings
