
Article · September 2, 2026
ಕೃಷ್ಣನ ಮಹಿಮೆಯೊ
By ರಾಧಾಕೃಷ್ಣಭಟ್ ಕುರುಮುಜ್ಜಿ
ಭಕ್ತಿಗೀತೆ; ರಾಧಾಕೃಷ್ಣ ಭಟ್ ಕುರುಮುಜ್ಜಿ
ಕೃಷ್ಣನ ಕೊಳಲಗಾನ ಭಗವದ್ಗೀತೆಯ ಬೋಧನೆ ಮತ್ತು ಆತನ ಮಹಿಮೆಯ ವರ್ಣನೆ ಧಾಟಿ--ಜೇನಿನಹೊಳೆಯೊ!
ಕೃಷ್ಣನ ಮಹಿಮೆಯೊ ಕೊಳಲಿನ ಮಾಯೆಯೊ
ಸುಧೆಯೊ ಆತನ ಕಿರುನಗೆಯೊ ...ಕೃಷ್ಣನ ಮಹಿಮೆಯೊ!
ಕೊರಳನು ಬಾಗಿಸಿ ಕೊಳಲಿನ ಮೇಲೆ
ಬೆರಳುಗಳಾಡುವ ಬಗೆಯೋ ಆಹಾ... ಕೃಷ್ಣನ ಮಹಿಮೆಯೊ!
ಕೊಳನು ನುಡಿಸುತ ಬಂದ ಮುಕುಂದ
ನಂದನ ಕಂದ ಹರಿಗೋವಿಂದ
ಗೋಪಾಂಗನೆಯರ ಆ ಅನುರಾಗ
ನುಡಿಸಿದನೀತ ವಿಧವಿಧ ರಾಗ
ಯಮುನೆಯ ತೀರದಿ ತಂಗಾಳಿಯು ಬೀಸಲು
ಕೃಷ್ಣನು ಕೊಳಲನು ಊದುತ ಬರಲು
ಕೊಳಲಿನ ಗಾನಕೆ ಗಾಳಿಯು ಸೋತಿತು
ಬೀಸಿತು ಹದವಾಗಿ... ಆಹಾ ಕೃಷ್ಣನಮಹಿಮೆಯೊ
ಕರ್ಮವ ಮಾಡಲು ಪಾರ್ಥನಿಗೆಂದ
ಧರ್ಮದ ಯುದ್ಧಕೆ ಜಯವನು ತಂದ
ಮಥುರೆಲಿ ಸೋದರಮಾವನ ಕೊಂದ
ಯದುಕುಲತಿಲಕನು ದೇವಕಿಕಂದ
ಭಗವದ್ಗೀತೆಯ ಆಸವಿ ನುಡಿಯೊ
ಭಾಗವತೋತ್ತಮ ತಿಳಿಸಿದ ಬಗೆಯೊ
ಪಾರ್ಥನ ಸಾರಥಿ ಪಾರ್ಥನಿಗರುಹಿದ
ಗೀತೆಯ ನೀತಿ ಇದು.... ಆಹಾ ಕೃಷ್ಣನ ಮಹಿಮೆಯೊ
Creative Writings
