Karada Vishwa

Article · November 7, 2026

ತಪಸ್ಸು, ಮೋಹ ಮತ್ತು ವಿಧಿಲೀಲೆ

ಸಂತೋಷ್ ಕುಮಾರ್ ನಡುಮನೆ

ವಿಶ್ವಾಮಿತ್ರ ಮಹರ್ಷಿಯ ತಪದಲಿ ಮೂಡಿದ ಗಾಯತ್ರಿ ಮಂತ್ರದ ಸೃಷ್ಟಿ |

ತ್ರಿಕಾಲಕೆ ನೆನೆಯುವೆದರ ಮಹತೆಯ ಮನದೊಳಿರಿಸುತ ಭಕುತಿಯಲಿ ದೃಷ್ಟಿ ||

ಮೇನಕೆಯ ವ್ಯಥೆಯುತ ಮದನನ ಅತಿವೃಷ್ಠಿ ಸೆಳೆಯಿತು ಕಾವ್ಯದ ದಾರಿಯನೆ |

ಗಗನಕ್ಕಿಳೆಗೆ ನಡುವಿನಲಿ ನಿಮಿರಿತು ತ್ರಿಶಂಕು ಸ್ವರ್ಗದ ವಿಚಿತ್ರ ಸೃಷ್ಟಿ ||

ಭೋಗದಾಸೆಗೆ ಬಿದ್ದು ಅಂತರವ ಕಳೆದುಕೊಂಡು ಅಲೆವ ಇಂದಿನ ನರಕೋಟಿಗೆ |

ತೃಷೆಯಲಿ ತೊಳಲುವ ಈ ಅಹಂಮತಿಗಲ್ಲವೋ ಪಾಠವು ಈ ಕಥೆಯೊಳಗೆ ||

ಬೆಸೆದ ಈ ಮಾಯೆಯ ಮರ್ಮವತಿವರೇ ಜಗದೆಲ್ಲರ ಕಷ್ಟದ ಮೂಲವನೆ —

ಹರಿಯ ಕೃಪೆಯಿಲ್ಲದೆ ಉಳಿಯುವುದೇ ಬದುಕು, ಹರಸಿ ಸಲಹುವೆನೆಲೆ ಅಣ್ಣಯ್ಯ||

ಬ್ರಹ್ಮರ್ಷಿಯೆನಿಸಿ ಜಗಕೆಲ್ಲ ಮಿತ್ರನಾದವನು ಗಾಯತ್ರಿ ಮಂತ್ರದ ಬಲದಿ |

ಮದನನ ವಶವಾಗಿ ಮೇನಕೆಯ ಒಲುಮೆಗೆ ತಪವನಳಿದನು ಮೌನಿಯು ಮುದದಿ ||

ಬೆಸೆದ ಶಕುಂತಲೆ ಮಾಡಿದೆ ಕಥೆಯಾ ಚಿತ್ರದಿ ವಿಧಿ ಬರೆದ ರಂಗದ ಆಟವಿದು |

ಸೂತ್ರಧಾರಿ ಬೇರೆ ಇರಲು ಪಾತ್ರದಲಿ ಸೋಲು-ಗೆಲುವುಗಳೆಲ್ಲ ಹರಿಯ ಪಾತ್ರೆಯ ಅನ್ನವಾಗಿಹುದು ಅಣ್ಣಯ್ಯ! ||

Creative Writings