Karada Vishwa

News · September 17, 2026

ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಬಗ್ಗೆ ಪ್ರೇರಣೆ ನೀಡಿದ ವೇಣು ಶರ್ಮಾ–ಅವನಿ ಶರ್ಮಾ..

ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.

ಮಂಗಳೂರಿನ ಸೈಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ School of Commerce, Finance and Accountancy ವತಿಯಿಂದ “IGNITE: Building the Entrepreneur Within” ಎಂಬ ಉದ್ಯಮಶೀಲತೆ ಅಭಿವೃದ್ಧಿಯ ಬಗೆಗಿನ ಕಾರ್ಯಕ್ರಮವು ಸೆಪ್ಟೆಂಬರ್ 15ರಂದು ಎರಿಕ್ ಮಥಿಯಾಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ MasterChef India ಸೆಮಿ ಫೈನಲಿಸ್ಟ್‌ಗಳೂ ಆಗಿರುವ ಕರಾಡ ಸಮುದಾಯದ ಹೆಮ್ಮೆಯ ಶ್ರೀ ವೇಣು ಶರ್ಮಾ ಉಪ್ಪಂಗಳ ಮತ್ತು ಮಗಳು ಶ್ರೀಮತಿ ಅವನಿ ಶರ್ಮಾ ಕುದ್ಕುಳಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ತಮ್ಮ ಉದ್ಯಮಶೀಲತೆಯ ಪಯಣ ಹಾಗೂ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

Karada Spicebox ನ ಸ್ಥಾಪಕರಾದ ಅವನಿ ಶರ್ಮಾ ಹಾಗೂ ಉದ್ಯಮಿ ಮತ್ತು ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿರುವ ವೇಣು ಶರ್ಮಾ ಅವರು, ಅವಕಾಶಗಳನ್ನು ಗುರುತಿಸುವುದು, ಹೊಸ ಆಲೋಚನೆಗಳನ್ನು ರೂಪಿಸುವುದು, ಸವಾಲುಗಳನ್ನು ಎದುರಿಸುವುದು ಮತ್ತು ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ರೂಪಿಸುವ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಚಿಂತನೆ, ಸೃಜನಶೀಲತೆ, ಪ್ರತಿ ಉದ್ಯಮದಲ್ಲೂ ಕ್ರಿಯಾತ್ಮಕ ರೂಪ ಮತ್ತು ನವೀನತೆಯ ಮನೋಭಾವ ಬೆಳೆಸುವಲ್ಲಿ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಿತು.

ಕರಾಡ ಸಮುದಾಯದ ಪ್ರತಿಭೆ ಮತ್ತು ಸಾಧನೆಗಳು ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಕಡೆಗಳಲ್ಲಿ ಗುರುತಿಸಲ್ಪಡುತ್ತಿರುವುದು ಹೆಮ್ಮೆಯ ವಿಚಾರ. ಯುವಜನರಿಗೆ ತಮ್ಮ ಅನುಭವದ ಮೂಲಕ ಪ್ರೇರಣೆ ನೀಡಿದ ವೇಣು ಶರ್ಮಾ ಮತ್ತು ಅವನಿ ಶರ್ಮಾ ಇವರಿಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.

Achievers
ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಬಗ್ಗೆ ಪ್ರೇರಣೆ ನೀಡಿದ ವೇಣು ಶರ್ಮಾ–ಅವನಿ ಶರ್ಮಾ..