
Article · April 10, 2026
ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ ಆದ್ಯ ಎಸ್. ಪಡ್ರೆ PUC ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ
ಕರಾಡ ವಿಶ್ವದ ಅಭಿನಂದನೆಗಳು ಹಾಗೂ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು..
ಕಾರ್ಕಳ ತಾಲೂಕು ತೆಳ್ಳಾರಿನ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಆದ್ಯ ಎಸ್. ಪಡ್ರೆ ಅವರು 2026ರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 99.33% ಅಂಕ ಪಡೆದ ಅವರ ಈ ಸಾಧನೆ ಕುಟುಂಬದವರಿಗೂ ಹಾಗೂ ಕರಾಡ ಸಮುದಾಯಕ್ಕೂ ಅಪಾರ ಸಂತೋಷವನ್ನು ತಂದಿದೆ. ಈಕೆ ಕಾರ್ಕಳದ ಕ್ರಿಯೇಟಿವ್ ಕಾಲೇಜ್ ನ ವಿದ್ಯಾರ್ಥಿನಿಯಾಗಿದ್ದು SSLC ಪರೀಕ್ಷೆಯಲ್ಲೂ 98%ಅಂಕ ಪಡೆದಿದ್ದಳು.
ಆದ್ಯ ಅವರು ಶ್ರೀ ಸತ್ಯನಾರಾಯಣ ಪಡ್ರೆ (ಬದಿ) ಮತ್ತು ಶ್ರೀಮತಿ ವಿದ್ಯ ಪಡ್ರೆ ಅವರ ಪುತ್ರಿಯಾಗಿದ್ದಾರೆ. ಬಾಲ್ಯದಿಂದಲೇ ಶಿಸ್ತು, ಪರಿಶ್ರಮ ಮತ್ತು ಅಭ್ಯಾಸದ ಮೇಲೆ ಒತ್ತು ನೀಡಿದ ಅವರು, ತಮ್ಮ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನ ನಡೆಸಿ ಈ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶೈಕ್ಷಣಿಕ ಸಾಧನೆಯ ಜೊತೆಗೆ, ಆದ್ಯ ಅವರು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಭಾಷಣ ಸ್ಪರ್ಧೆಗೆ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದು, ಅದರಲ್ಲಿ ಒಂದು ಬಾರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಎರಡು ಬಾರಿ ತೃತೀಯ ಸ್ಥಾನ ಪಡೆದು ತಮ್ಮ ವಾಕ್ಪಟುತ್ವವನ್ನು ಸಾಬೀತುಪಡಿಸಿದ್ದಾರೆ.
ಇದರ ಜೊತೆಗೆ, ಹವ್ಯಾಸವಾಗಿ ಅಕ್ರಿಲಿಕ್ ಪೇಂಟಿಂಗ್‌ನಲ್ಲೂ ಪರಿಣಿತೆಯಾದ ಇವಳ ಅನೇಕ ಕಲಾಕೃತಿಗಳು ಮನಮೋಹಕವಾಗಿ ಮೂಡಿ ಬಂದಿವೆ. ಅವರ ಕಲಾತ್ಮಕತೆ ಕೂಡ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.
ಅಧ್ಯಾಪಕರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಹಾಗೂ ಸ್ವಂತ ಪರಿಶ್ರಮವೇ ಅವರ ಯಶಸ್ಸಿನ ಬುನಾದಿಯಾಗಿವೆ. ಆದ್ಯ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಗಳನ್ನು ತಲುಪಲಿ ಎಂದು ಹಿತೈಷಿಗಳು ಹಾರೈಸಿದ್ದಾರೆ.
ಆದ್ಯ ಅವರ ಯಶಸ್ಸು ಕರಾಡ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಆದ್ಯಾಳಿಗೆ ಕರಾಡ ವಿಶ್ವದ ಅಭಿನಂದನೆಗಳು ಹಾಗೂ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು..

ಆದ್ಯಾ ಅವರ ಕಲಾಕೃತಿಗಳು -


















AchieversArtEducationWomen
