Karada Vishwa

Article · November 8, 2026

ದೀಪಾವಳಿ

By ಪ್ರಸನ್ನ ಪ್ರಸಾದ್ ಆವಳಮಠ

ಪ್ರಸನ್ನ ಪ್ರಸಾದ್ ಆವಳಮಠ

ದೀಪದ ಬೆಳಕಲಿ ಮನಗಳು ಬೆಳಗಲಿ
‎ಅಜ್ಞಾನವೆಂಬ ಕತ್ತಲು ಅಳಿಯಲಿ
‎ಹಣತೆ ಹಚ್ಚಲು ಬೆಳಕು ಸುತ್ತಲೂ
‎ಅಹಂಕಾರವು ಉರಿದು ಹೋಗಲು
‎
‎ಸ್ನೇಹ ತೈಲದೊಳು ಮಿಂದೆದ್ದ ಪ್ರಣತಿ
‎ಜ್ವಲಿಸಲು ಸಂತಸ ಮನೆಯ ಮುಂಬಾಗಿಲು
‎ಮನೆ ಮಂದಿಯ ಕರದೊಳಗೆ ಜ್ಯೋತಿ
‎ಕಿಡಿಯು ಕುಡಿಯೊಡೆದಿದೆ ನಗುವ ಹೊತ್ತು
‎
‎ಅಭ್ಯಂಜನದಲಿ ಕೊಳೆ ತೊಳೆದ ಕಾಯ
‎ಎಲ್ಲ ಸಂಕಷ್ಟಗಳು ಕಿಚ್ಚಿನಲಿ ಮಾಯ
‎ಬಂಧ ಬೆಸೆಯುವ ಹಬ್ಬ ಹೊಸ ಜೋಡಿಗೆ
‎ಹೊಸ ಪರ್ವವಿದು ಹಸುಗೂಸಿಗೆ
‎
‎ಬಲಿಯ ಬರಮಾಡಿ ಸ್ಮರಿಸುವ ಸುದಿನ
‎ಸಿಹಿಯ ಹಂಚುತ ಗೋಮಾತೆಯ ಪೂಜಿಸುವ
‎ತುಳಸಿಯ ನಮಿಸುವ ಆರಾಧಿಸುವ ದಿನ
‎ಭಕ್ತಿಯ ಪ್ರತೀಕ ಜಗಮಗಿಸುವ ದೀವಿಗೆ
‎
‎
‎
‎

Creative Writings