Karada Vishwa

Article · May 5, 2026

ಮ್ಯಾಂಗೋ - ಕೊಕೊನಟ್ ಐಸ್ಕ್ರೀಮ್

- ರಕ್ಷಿತಾ ನುಳಿಯಾಲು

ಬೇಕಾದ ಸಾಮಗ್ರಿಗಳು : 
ಮಾವಿನ ಹಣ್ಣಿನ ಪಲ್ಪ್-1 ಬೌಲ್ (ನಾನಿಲ್ಲಿ 5-6ಮಾವಿನ ಹಣ್ಣಿನ ಪಲ್ಪ್ ತಗೊಂಡಿದ್ದೇನೆ)
ತೆಂಗಿನ ಹಾಲು -250ml
ಹಾಲು -250ml
ಕಸ್ಟರ್ಡ್ ಪೌಡರ್ -4-5tsp
ಜೇನು -50ml
ಫ್ರೆಶ್ ಕ್ರೀಮ್ -250ml
ಮಿಲ್ಕ್ ಮೇಡ್ -200 

ವಿಧಾನ 
ಮೊದಲಿಗೆ ಒಂದು ಲೋಟವನ್ನು ತಗೊಂಡು ಅದರಲ್ಲಿ ನಾಲ್ಕರಿಂದ ಐದು ಸ್ಪೂನ್ ಕಸ್ಟರ್ಡ್ ಪೌಡರನ್ನು ಹಾಕಿ ಅದಕ್ಕೆ ಮೂರರಿಂದ ನಾಲ್ಕು ಚಮಚ ಹಾಲನ್ನು ಹಾಕಿ ಗಂಟಿಲ್ಲದಂತೆ ಕೈಯಾಡಿಸಿ. ನಂತರ ಬಾಕಿ ಉಳಿದ ಹಾಲನ್ನು ಒಂದು ಪಾತ್ರೆಗೆ ಹಾಕಿ ಅದು ಕುದಿವಾಗ ಕಲಸಿಟ್ಟ ಕಸ್ಟರ್ಡ್ ಪೌಡರ್ ನ್ನು ಅದಕ್ಕೆ ಹಾಕಿ ಕ್ರೀಮ ಕನ್ಸಿಸ್ಟೆನ್ಸಿಗೆ ಬರುವ ತನಕ ಕೈಯಾಡಿಸಿ. ನಂತರ ಅದನ್ನು ತಣಿಯಲು ಇಡಿ. 
       ಅದು ತಣಿಯುವ ಸಮಯದಲ್ಲಿ, ಒಂದು ಮಿಕ್ಸಿ ಜಾರಿಗೆ 5 ರಿಂದ 6 ಮೀಡಿಯಂ ಮಾವಿನ ಹಣ್ಣಿನ ತುಂಡುಗಳನ್ನು ಹಾಕಿ ಪಲ್ಪ್ ಮಾಡಿ ಇಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ತುರಿದ ತೆಂಗಿನಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ಕಡಿದು, ಒಂದು ಬಟ್ಟೆಯಲ್ಲಿ ಹಾಕಿ ಹಿಂಡಿ ಅದರ ಹಾಲನ್ನು ತೆಗೆದಿರಿಸಿ. ತಣಿದ ಕಸ್ಟರ್ಡ್ ಪೌಡರ್ ನ ಮಿಕ್ಸಿಗೆ, ಮ್ಯಾಂಗೋ ಪಲ್ಪ್, ತೆಂಗಿನ ಹಾಲು, ಜೇನು, ಫ್ರೆಶ್ ಕ್ರೀಮ್ ಹಾಗು ಮಿಲ್ಕ್ ಮೇಡ್ ಅನ್ನು ಹಾಕಿ ಚೆನ್ನಾಗಿ ಕ್ರೀಮ್ ಕನ್ಸಿಸ್ಟೆನ್ಸಿಗೆ ಬರುವ ತನಕ ಮಿಕ್ಸ್ ಮಾಡ್ತಾ ಇರಿ. 
         ಮಿಕ್ಸ್ ಮಾಡಿ ನಂತರ ಅದನ್ನು ಐಸ್ ಕ್ರೀಮ್ ಮೌಲ್ಡ್ ಗೆ ಹಾಕಿ ಫ್ರಿಜ್ಜಲ್ಲಿ ಒಂದು ದಿವಸ ಗಟ್ಟಿಯಾಗಲು ಬಿಡಿ. ಬೇಕಿದ್ದಲ್ಲಿ ಇದನ್ನು ಫ್ರಿಜ್ಜಿನಲ್ಲಿ ಇರಿಸುವ ಮೊದಲು ಮೇಲ್ಗಡೆ ಮಾವಿನಹಣ್ಣಿನ ತುಂಡನ್ನು ಸಣ್ಣದಾಗಿ ಕತ್ತರಿಸಿ ಹಾಕಬಹುದು.
  ಈ ಸೆಖೆಗಾಲದಲ್ಲಿ ಮನೆಯವರೊಟ್ಟಿಗೆ ಸೇರಿ ಸವಿದು ಮೈ-ಮನವನ್ನು ತಂಪಾಗಿಸಿ.
Food