
News · October 29, 2025
ಕರಾಡ ಮಹಿಳಾ ವೇದಿಕೆ – ನವರಾತ್ರಿ ಆನ್‌ಲೈನ್ ಕಾರ್ಯಕ್ರಮಗಳು
( 22 ಸೆಪ್ಟೆಂಬರ್ – 26 ಸೆಪ್ಟೆಂಬರ್ 2025 ) ವರದಿ ಕೃಪೆ : ಶ್ರೀಮತಿ ಅಶ್ವಿನಿ ರವಿಚಂದ್ರ ಭಟ್ ಮತ್ತು ತಂಡ
ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಇದರ ಆಶ್ರಯದಲ್ಲಿ ಮಾರ್ಚ್ 2, 2025 ರಂದು ಉದ್ಘಾಟನೆಗೊಂಡ ಮಹಿಳಾ ವೇದಿಕೆಯು ನವರಾತ್ರಿಯ ಶುಭಸಂದರ್ಭದಲ್ಲಿ ಬೆಂಗಳೂರಿನ ಮಹಿಳೆಯರು ಹಾಗೂ ಮಕ್ಕಳಿಗಾಗಿ Google Meet ವೇದಿಕೆಯ ಮುಖಾಂತರ ಹಲವಾರು ಸ್ವರ್ಧೆಗಳನ್ನು ಏರ್ಪಡಿಸಿತ್ತು. ಅತ್ಯುತ್ಸಾಹದಿಂದ ಮಕ್ಕಳು ಹಾಗೂ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು. ಮಹಿಳಾ ತೀರ್ಪುಗಾರರು ಸ್ಪರ್ಧೆಗಳಲ್ಲಿ ಉತ್ತಮವಾಗಿ ತೀರ್ಪನ್ನು ಕೊಟ್ಟಿರುತ್ತಾರೆ. ಈ ಎಲ್ಲಾ ಸ್ಪರ್ಧೆಗಳು ಕರಾಡ ಮಹಿಳೆಯರಿಂದ ಅತ್ಯಂತ ಸುಂದರವಾಗಿ ಸಂಯೋಜಿಸಲ್ಪಟ್ಟಿದ್ದವು. ಕರಾಡ ಮಹಿಳೆಯರ ನೇತೃತ್ವದಲ್ಲಿ ಸಾಮೂಹಿಕ ಸೌಂದರ್ಯ ಲಹರಿ ಪಠನ ಕಾರ್ಯಕ್ರಮವೂ ನಡೆಯಿತು. ಮಹಿಳಾ ವೇದಿಕೆಯ ಈ ನವರಾತ್ರಿಯ ಪ್ರಥಮ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಂಪನ್ನಗೊಂಡಿತು ಎಂದು ಹೇಳಲು ಸಂತೋಷವಾಗುತ್ತದೆ.
ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಮಹಿಳೆಯರು ಶ್ರೀಮತಿ ಸುಜಾತಾ ದರ್ಖಾಸ್ತು, ಶ್ರೀಮತಿ ರಕ್ಷಿತಾ, ಶ್ರೀಮತಿ ದೀಕ್ಷಾ ಕುದ್ಕುಳಿ, ಶ್ರೀಮತಿ ದೀಪಶ್ರಿ ಕಯಂಪಾಡಿ , ಶ್ರೀಮತಿ ಮಹಿತಾ ಭಟ್, ಶ್ರೀಮತಿ ಪೂಜಾ ಭಟ್, ಶ್ರೀಮತಿ ಮಧುರಾ ಗುರುಪ್ರಸಾದ್, ಶ್ರೀಮತಿ ವಾಣಿ ವಿಘ್ನೇಶ್, ಶ್ರೀಮತಿ ಶಾಲಿನಿ, ಶ್ರೀಮತಿ ಶಾಂತಾ ದೈತೋಟ, ಶ್ರೀಮತಿ ಅಂಜಲಿ ಪಟವರ್ಧನ್, ಶ್ರೀಮತಿ ಅರ್ಚನಾ ಶ್ರೀರಾಮ್, ಶ್ರೀಮತಿ ಅಕ್ಷತಾ ಭಟ್, ನಮ್ರತಾ ಹಾಗೂ ದೀಪಾ.
ಎಲ್ಲಾ ಕಾರ್ಯಕ್ರಮಗಳನ್ನು ಸಂಯೋಜಿಸಿದವರು ಶ್ರೀಮತಿ ಮಹಿತಾ ಭಟ್, ಶ್ರೀಮತಿಪೂಜಾ ಭಟ್, ಶ್ರೀಮತಿಅಕ್ಷತಾ ಭಟ್ ಹಾಗೂ ಶ್ರೀಮತಿ ಅಶ್ವಿನಿ ರವಿಚಂದ್ರ ಭಟ್ ಅವರು.
ನವರಾತ್ರಿಯಲ್ಲಿ ನಡೆದ ಈ ಎಲ್ಲಾ ಸ್ಪರ್ಧೆಗಳ ವಿಜೇತರ ವಿವರ ಇಲ್ಲಿದೆ.
ಕರಾಡ ಮಹಿಳಾ ವೇದಿಕೆ – ನವರಾತ್ರಿ ಆನ್‌ಲೈನ್ ಕಾರ್ಯಕ್ರಮಗಳು
📅 ೨೨ ಸೆಪ್ಟೆಂಬರ್ – ೨೬ ಸೆಪ್ಟೆಂಬರ್ ೨೦೨೫
🪔 ೨೨ ಸೆಪ್ಟೆಂಬರ್ ೨೦೨೫ – ಉದ್ಘಾಟನೆ ಮತ್ತು ಯುಗಲ ಗಾನ(Duet Song) ಸ್ಪರ್ಧೆ
ಜೂನಿಯರ್ ವಿಭಾಗ
೧ನೇ ಬಹುಮಾನ – ಭುವಿ ಮತ್ತು ಪ್ರತಿಭಾ ಸಜಂಗದ್ದೆ
೨ನೇ ಬಹುಮಾನ – ಅವ್ಯುಕ್ತಾ ಮತ್ತು ಅಕ್ಷತಾ ಭಟ್ ಕನಿಯಾಲ
೩ನೇ ಬಹುಮಾನ – ಚಿರಂತನಲಕ್ಷ್ಮಿ ಮತ್ತು ಸುಪ್ರಭಾ ಕಡಂದೇಲು
ಸೀನಿಯರ್ ವಿಭಾಗ
೧ನೇ ಬಹುಮಾನ – ಸಾವನಿ ಮತ್ತು ಶ್ರಾವಣಿ ಗುರ್ಜರ್
೨ನೇ ಬಹುಮಾನ – ಶ್ರೇಯ ಮತ್ತು ಶ್ರಾವ್ಯ ಪಂಡಿತ್
೩ನೇ ಬಹುಮಾನ – ಸಂಜನಾ ಮತ್ತು ಸ್ತುತಿ
📘 ೨೩ ಸೆಪ್ಟೆಂಬರ್ ೨೦೨೫ – ಪ್ರಶ್ನೋತ್ತರ (Quiz)
ಮಕ್ಕಳ ವಿಭಾಗ
೧ನೇ ಬಹುಮಾನ – ತನ್ಮಯ್ ಭಟ್ ಆವಳಮಠ
೨ನೇ ಬಹುಮಾನ – ಸಮೀಕ್ಷಾ ಮಾಣಿಮೂಲೆ
೩ನೇ ಬಹುಮಾನ – ಪ್ರದ್ಯೋತ್ ಭಟ್ ಆಕಿರೆಕಾಡು
ಪ್ರೋತ್ಸಾಹಕ ಬಹುಮಾನ – ಪುನರ್ವಿ ಎಸ್
ಹಿರಿಯರ ವಿಭಾಗ
೧ನೇ ಬಹುಮಾನ – ಪೂರ್ಣಿಮಾ ಪಂಡಿತ್
೨ನೇ ಬಹುಮಾನ – ವೀಣಾ ಗುರ್ಜರ್
೩ನೇ ಬಹುಮಾನ – ಶಾಂತಿ ಬಿ ಕಡಂದೇಲು
🎤 ೨೪ ಸೆಪ್ಟೆಂಬರ್ – ಮಕ್ಕಳ ಕಥೆಹೇಳುವ ಸ್ಪರ್ಧೆ ಮತ್ತು ಹಿರಿಯರ ಆಶುಭಾಷಣ (Pick & Speak)
ಮಕ್ಕಳ ಕಥಾ ಕಥನ
೧ನೇ ಬಹುಮಾನ – ಪರ್ಣಿಕಾ ಭಟ್ ಆಕಿರೆಕಾಡು
೨ನೇ ಬಹುಮಾನ – ಅವ್ಯುಕ್ತಾ ಭಟ್ ಕನಿಯಾಲ
೩ನೇ ಬಹುಮಾನ – ಶ್ರೀಸ್ಕಂದ ಪಡ್ಪು ಮತ್ತು ಪುನರ್ವಿ
ವಯಸ್ಕರ ಆಶುಭಾಷಣ
೧ನೇ ಬಹುಮಾನ – ಸುಜಾತಾ ಭಟ್ ದರ್ಖಾಸ್ತು
೨ನೇ ಬಹುಮಾನ – ದೀಪಶ್ರೀ
೩ನೇ ಬಹುಮಾನ – ಸುಪ್ರಭಾ ಕಡಂದೇಲು
🎨 ೨೫ ಸೆಪ್ಟೆಂಬರ್ ೨೦೨೫ – ಹರಿವಾಣ ತಟ್ಟೆ ರಂಗೋಲಿ ಸ್ಪರ್ಧೆ
೧ನೇ ಬಹುಮಾನ – ಮಹಿತಾ ಭಟ್ ಕಡಂದೇಲು
೨ನೇ ಬಹುಮಾನ – ಸಿಂಧೂರಾ ಎಂ.ಜಿ.
೩ನೇ ಬಹುಮಾನ – ಮೇಘಾ ಪ್ರಕಾಶ್
🌸 ರಂಗೋಲಿ ಸ್ಪರ್ಧೆ
೧ನೇ ಬಹುಮಾನ – ಮಹಿತಾ ಭಟ್ ಕಡಂದೇಲು
೨ನೇ ಬಹುಮಾನ – ಅಕ್ಷತಾ ಭಟ್ ಕನಿಯಾಲ
೩ನೇ ಬಹುಮಾನ – ಸುಜಾತಾ ಭಟ್ ದರ್ಖಾಸ್ತು ಮತ್ತು ಡಾ. ಬರ್ಖಾ ಮಂಡ್ಲೋಯಿ
👨👩👧👦 ಫ್ಯಾಮಿಲಿ ಗ್ರೂಪ್ ಫೋಟೋ ಸ್ಪರ್ಧೆ
೧ನೇ ಬಹುಮಾನ – ಅಕ್ಷತಾ ಭಟ್ ಕನಿಯಾಲ
೨ನೇ ಬಹುಮಾನ – ಶಾಂತಿ ಬಿ ಕಡಂದೇಲು
೩ನೇ ಬಹುಮಾನ – ಸುಜಾತಾ ಭಟ್ ದರ್ಖಾಸ್ತು ಮತ್ತು ಡಾ. ಬರ್ಖಾ ಮಂಡ್ಲೋಯಿ
🙏 ೨೬ ಸೆಪ್ಟೆಂಬರ್ ೨೦೨೫ – ಸೌಂದರ್ಯಲಹರಿ ಸಾಮೂಹಿಕ ಪಠನೆ ಮತ್ತು ಸಮಾರೋಪ ಸಮಾರಂಭ




