Karada Vishwa

Article · September 10, 2026

ತುಂಟ ಕೃಷ್ಣ

ಸಂಧ್ಯಾ ಕೊರೆಕ್ಕಾನ

ತಾಯಿ ಯಶೋದೆಯು ಹುಡುಕುತ ಬಂದಳು

ನನ್ನಯ ಕಂದನು ಎಲ್ಲಮ್ಮ //

ಕಜ್ಜಲ ಮೈಗೆ ಹಚ್ಚಿಹನಮ್ಮ

ಮಜ್ಜನ ಮಾಡುವೆ ಎಂದಿಹೆನು

ಗೆಜ್ಜೆಯ ದನಿಯದೆ ಕೇಳಿಸುತಿಲ್ಲ

ಹೆಜ್ಜೆಯ ಮೆಲ್ಲಗೆ ಇಡುತಿಹನು

ಆಡಗಿಹನವನನು ಹುಡುಕಲು ಬನ್ನಿರಿ

ಬೆಣ್ಣೆಯ ಮೆಲ್ಲಲು ಬಂದಿಹನೇ?

ಗೋಕುಲ ಸುತ್ತಿ ದಣಿದಿಹೆ ನಾನು

ಗೊಲ್ಲರ ಸಂಗಡ ಹೋಗಿಹನೆ ?

ಹೊತ್ತದು ಮೀರಿತು ಸಿಟ್ಟದು ಏರಿತು

ಕೋಲನು ತಂದು ಯಶೋದಾ ಮಾ

ಕತ್ತನು ಬಗ್ಗಿಸಿ ನಿಂತನು ಕಂದನು

ಬಂದೆನು ನಾ ಹೊಡಿಬೇಡಮ್ಮ

ನಗುತಲಿ ಕಂದನ ಅಪ್ಪುತ ನಿಂತಳು

ಕೋಪವನೆಲ್ಲ ಮರೆಯುತ್ತ

ಕರವನು ಹಿಡಿಯುತ ಮನೆಕಡೆ ಬಂದಳು

ಮುದ್ದಿನ ಕಂದ ಎನ್ನುತ್ತ

Creative Writings