Karada Vishwa

Article · November 7, 2026

ಮುಕ್ತಕ

By ಸಂಧ್ಯಾ ಕೊರೆಕ್ಕಾನ

ಸಂಧ್ಯಾ ಕೊರೆಕ್ಕಾನ

ಹಚ್ಚಿರುವ ಹಣತೆಯದು ಗಾಳಿಗಲುಗಾಡುತಿರೆ
ಅಚ್ಚರಿಯು ಏನಿಲ್ಲ ನಂದಿಹೋದರದು
ನೆಚ್ಚಿರುವ ಸಂಬಂಧ ನಡುಗಲಾರಂಭಿಸಲು
ಎಚ್ಚರಿಕೆಯಿರಬೇಕು ಬಾಳಸಂಧ್ಯೆ

Creative Writings