Karada Vishwa

Article · October 25, 2025

ತಪ್ಪಿನ ಅರಿವು

(ಸಣ್ಣ ಕಥೆ) ಲೇಖಕಿ : ಸ್ಮಿತಾ ಬಾಯಾರು                    

 ಈ ದಿನ ಊರಿನ ಸಮೀಪದ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯುತ್ತಿತ್ತು. ಊರಿನ ಜನತೆಯಲ್ಲಿ ಅದೇನೋ ಸಂಭ್ರಮ. ಹಲವಾರು ಸಂಘ ಸಂಸ್ಥೆಗಳ ಹಾಗೂ ಊರಿನ ಯುವಜನರ ಕಾರ್ಯಕ್ಷಮತೆ ನೋಡಿಯೇ ಆನಂದಿಸಬೇಕು. ಜಾತ್ರಾ ಮಹೋತ್ಸವಕ್ಕೆ ವಿಷೇಶ ಪೂಜೆ, ಅನ್ನದಾನ, ಅದರ ಜೊತೆಗೆ ಇನ್ನೂ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಧಾರ್ಮಿಕ ಭಾಷಣವೂ ಈ ದಿನ ಜರುಗಲಿತ್ತು. ಕುಮಾರಿ ಶ್ರೀ ವಿದ್ಯಾ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು, ಈಗಾಗಲೇ ಸಾಕಷ್ಟು ಸಂಚಲನವನ್ನು ಮೂಡಿಸಿ ಜನರ ಮನ್ನಣೆಗೆ ಸಹ ಪಾತ್ರಳಾಗಿದ್ದು, ಸಮೀಪದ ಊರಿನಿಂದ ಬಂದ  ಇವರ ಭಾಷಣ ಕೇಳಲು ಎಲ್ಲರೂ ಉತ್ಸುಕರಾಗಿದ್ದರು.
             ದೇವಾಲಯದ ಮುಖ್ಯ ಅಧ್ಯಕ್ಷರು ಶೇಷನಾರಾಯಣ ಭಟ್ಟರು, ಅವರ ಮಗನಾದ ರಾಜೇಶನು ,ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ಆಗಿದ್ದನು. ಶ್ರೀ ವಿದ್ಯಾಳ ಭಾಷಣವನ್ನು ಅವನೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಯೋಜಿಸಲು ಮುಂದಾಗಿದ್ದನು... ಕಾರಣವಿಷ್ಟೇ ,ಅವರು ಇಬ್ಬರೂ ಪರಸ್ಪರ ಪ್ರೀತಿಯ ಬಲೆಗೆ ಬಿದ್ದು ಈಗಾಗಲೇ ವರ್ಷಗಳು ಸರಿದಿದ್ದವು.
             ಶೇಷನಾರಾಯಣರಿಗೆ ಇಬ್ಬರು ಮಕ್ಕಳು. ಮಗ ರಾಜೇಶ , ಸಮೀಪದ ಬ್ಯಾಂಕ್ ಉದ್ಯೋಗಿ. ಮಗಳು ರಜನಿ ಉನ್ನತ ಶಿಕ್ಷಣ ಮುಗಿಸಿ ಬೇರೆ ಮನೆ ಸೊಸೆ ಆಗಿದ್ದಾಳೆ. ಭಟ್ಟರ  ಹೆಂಡತಿ ಮಕ್ಕಳನ್ನು ಇವರ ಕೈಯಲ್ಲಿ ಇಟ್ಟು ,ದೇವರ ಪಾದ ಸೇರಿ ಆಗಿದೆ. ಮಕ್ಕಳನ್ನು ಇವರು ಚೆನ್ನಾಗಿ ಸಾಕಿ ಬೆಳೆಸಿದವರು. ಮೂಲತಃ ಕೃಷಿಕರಾಗಿದ್ದರು, ಸುಖವಾಗಿ ಬಾಳಿ ಬದುಕಲು, ಬೇಕಾದಷ್ಟು ಆಸ್ತಿ ಇವರಿಗೆ ಇತ್ತು. ತಾಯಿ ಇಲ್ಲದ ಮಕ್ಕಳನ್ನು ಹೆಚ್ಚು ಮುದ್ದು ಮಾಡಿ ಸಾಕಿದ್ದರು. ಬಿಡುವಿನ ವೇಳೆಗಳಲ್ಲಿ ಅಲ್ಲಿ ಇಲ್ಲಿ ಧಾರ್ಮಿಕ ಭಾಷಣ, ಸಾಮಾಜಿಕ ಭಾಷಣಗಳನ್ನು ಮಾಡಿ ಚಪ್ಪಾಳೆಯನ್ನೂ ಗಿಟ್ಟಿಸಿದವರು.
                    ಮಗಳು ರಜನಿಗೆ ತಕ್ಕ ವರನನ್ನು ಹುಡುಕಿ ಮದುವೆ ಮಾಡಿಕೊಟ್ಟಿದ್ದರು. ರಾಜೇಶ ಇನ್ನೂ, ಮದುವೆ ಆಗಬೇಕಷ್ಟೆ . ರಾಜೇಶ ವಿದ್ಯಾಳ ಪ್ರೇಮ ಅರಿತ ತಂಗಿ ಮನೆಯಲ್ಲಿ ಅಪ್ಪನನ್ನೂ ,ಒಪ್ಪಿಸಿ ಇದ್ದ ಒಬ್ಬನೇ ಅಣ್ಣನ ಮದುವೆ ಅದ್ದೂರಿಯಾಗಿಯೇ ನಡೆಸಿದ್ದಳು. ಸಂಸಾರದಲ್ಲಿ ಮದುವೆ ದಿನ ಅದೆಷ್ಟೊ ಸಂತಸ ,ಸಂಭ್ರಮ ಸಡಗರ ಮನೆಮಾಡಿತ್ತೋ , ಅಷ್ಟೇ ಬೇಗನೇ ಈ ಮನೆಯ ವಾತಾವರಣ ಬದಲಾಗಿತ್ತು.
            ಶೇಷಣ್ಣನವರ ಅತೀ ಮುದ್ದು ಎಲ್ಲಾ ರೀತಿಯ ಸವಲತ್ತು ಸುಖವನ್ನು ಮಾತ್ರ ಅನುಭವಿಸಿದ ರಜನಿಗೆ ಗಂಡನ ಮನೆಯ ಜವಾಬ್ದಾರಿ ಬೇಡವಾಗಿ ಗಂಡನನ್ನು ಬಿಟ್ಟು ಮನೆಗೆ ಬಂದು ವಾಸಮಾಡುತ್ತಾಳೆ.ತಂದೆಯವಳನ್ನು ಒಳ್ಳೆ ಮಾತು ಹೇಳಿ ,ಗಂಡನ ಮನೆಗೆ ಕಳಿಸುವ ಬದಲು ಅವಳ ಮಾತನ್ನು ಸರಿ ಎಂದು, ತಿಳಿದು ಮನೆಯಲ್ಲೆ ಇಟ್ಟುಕೊಂಡು ಸಾಕುತ್ತಾರೆ, ಆಗ ವಿದ್ಯಾಳ ಜೀವನದಲ್ಲಿ ಅನಾನುಕೂಲತೆಗಳು ಶುರುವಾಗುತ್ತದೆ. ತಂದೆ ಮಗಳಿಗೆ ವಿದ್ಯಾಳ ಏಳಿಗೆಗಳು ಸಹಿಸಲಾರದೆ, ಅವಳಿಗೆ ರಾಜೇಶ ಬ್ಯಾಂಕಿಗೆ ಹೋರಟ ನಂತರ ನಾನಾ ರೀತಿಯಲ್ಲಿ ಹಿಂಸಿಸಲು ಪ್ರಯತ್ನ ಪಡುತ್ತಾರೆ.
                ಶೇಷಣ್ಣ ತಮ್ಮ ಭಾಷಣಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿಗತಿಗಳ ಬಗ್ಗೆ ಚೆನ್ನಾಗಿ ಅರಿತು ಮಾತಾಡುತ್ತಾ, ಬಂದ ಹೆಣ್ಣು ಮಗಳನ್ನು ಮಹಾಲಕ್ಷ್ಮಿಯಾಗಿ ನೋಡಿದರೆ, ಮನೆಯಲ್ಲಿ ಯಾವತ್ತೂ ಸಂಪತ್ತಿಗೆ ಕೊರತೆ ಇರಲಾರದು, ಎಂದೂ ,ಬಂದ ಹೆಣ್ಣು ಮಗಳನ್ನು ದರಿದ್ರದೇವತೆಯಾಗಿ ಕಂಡರೆ ಮನೆಯಾವತ್ತು ದರಿದ್ರತಿಗೆಯಲ್ಲಿ ಇರಬಹುದು ಎಂಬ ತಮ್ಮಅಭಿಪ್ರಾಯ ವ್ಯಕ್ತಪಡಿಸುತ್ತಾರೆ, ಈ ಊರಿನ ಹೆಣ್ಣು ಮಕ್ಕಳ ಶ್ರೇಯಸ್ಸಿಗೆ ಬೇಕಾಗಿ ಇನ್ನೇನೋ ಬೊಗಳೆ ಬಿಟ್ಟಿದ್ದರು. ಕೇಳುಗರಿಗೆ ಅಂತೂ ವಿದ್ಯಾಳ ಭಾಗ್ಯವೆಂದೇ ಅರಿತು, ಶೇಷಣ್ಣನ ಕುರಿತು ಹೊಗಳುತ್ತಾರೆ. ಮನೆಯ ವಿಚಾರ ವಿದ್ಯಾಳು ಗಂಡನಲ್ಲೂ ಹೇಳದೆ ಗೌಪ್ಯವಾಗಿ ಅನುಭವಿಸುತ್ತಾಳೆ.
   ಈ ದಿನ ಜೋರು ಮಳೆಯೂ ಬರುತ್ತಿತ್ತು, ರಾಜೇಶನು ಬ್ಯಾಂಕಿಗೆ  ಹೊರಟ ಕೂಡಲೇ ಅಪ್ಪನೂ, ಮಗಳೂ ,ಸೇರಿ ಒಂದು plan ರೂಪಿಸಿರುತ್ತಾರೆ. ಬೆಳಗ್ಗೆ ಸ್ನಾನ ಮಾಡಿ ದೇವರಿಗೆ ಹೂ ಇಡಲು ವಿದ್ಯಾಳು ಬರುವುದು, ಅರಿತ ಅವರು ದೇವರ ದೀಪದ ಎಣ್ಣೆ ಬಾಗಿಲಲ್ಲೇ ಚೆಲ್ಲಿ, ಅವಳ ಕಾಲು ಮುರಿದು ಬಿದ್ದರೆ, ಇನ್ನುಮುಂದೆ ಅವಳು ಭಾಷಣ ಮಾಡಲು ಹೋಗಲು ಸಾಧ್ಯವಿಲ್ಲದೇ, ಮನೆಯಲ್ಲೇ ಬಿದ್ದಿರಲಿ, ಎಂದು ಕನಸು ಕಾಣುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಅವಳ ಮೊಬೈಲ್ ಒಂದೇ ಸಮನೆ ರಿಂಗಣಿಸಿತು. ಯಾರಪ್ಪಾ ಈ ಸಮಯದಲ್ಲಿ ಎಂದು, ಫೋನ್ ರಿಸೀವ್ ಮಾಡುತ್ತಾಳೆ, ಅದು ರಾಜೇಶ್ ನ ಗೆಳೆಯನದ್ದಾಗಿದ್ದು ರಾಜೇಶ್ ನ ಸ್ಕೂಟರ್ Skid ಆಗಿದೆ, ಎಂದು ಕಾಲಿನ ಮೂಳೆ ಕಟ್ಟಾಗಿ hospital ಲ್ಲಿ admit ಆದ ವಿಷಯ ತಿಳಿದು ವಿದ್ಯಾ, ಮಾವ ಹಾಗೂ ರಜನಿಗೆ ವಿಷಯ ತಿಳಿಸಿ , ಆಸ್ಪತ್ರೆಗೆ ತೆರಳಿದರು. ಆಸ್ಪತ್ರೆಗೆ ತೆರಳಿದ ವಿದ್ಯಾಳಿಗೆ ರಾಜೇಶನನ್ನು ಕಂಡು ತಲೆ ಸುತ್ತು ಬಂದು ಬೀಳುತ್ತಾಳೆ ಅಲ್ಲೇ, ಇದ್ದ lady doctor ಲ್ಲಿ ತಪಾಸಣೆಗೆ ಹೋದಾಗ ವಿದ್ಯಾಳು ಈಗಾಗಲೇ 2 ತಿಂಗಳ ಗರ್ಭಿಣಿ ಎಂದು ಹೇಳುತ್ತಾರೆ. ವಿಷಯ ತಿಳಿದ ಶೇಷಣ್ಣನಿಗೆ ಸಂತಸವೂ ,ಮನದಾಳದಲ್ಲಿ ಚಿಂತೆಯೂ ಮೂಡದೇ ಇರಲಿಲ್ಲ. ತಾನು ಮಾಡಿದ ತಪ್ಪು ಪದೇ ಪದೇ, ಮನಃಪಟಲದಲ್ಲಿದ್ದು ,ಅತಂತ್ರ ಪರಿಸ್ಥಿಯಲ್ಲಿರುತ್ತಾರೆ. ತದನಂತರದ ದಿನಗಳಲ್ಲಿ ವಿದ್ಯಾ ರಾಜೇಶ್ ನ ಎಲ್ಲಾ ಕೆಲಸಗಳನ್ನು ಮಾಡಿ ,ಮನೆಯ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಾಗಿ ಮಾಡಿಕೊಂಡು ಸಂತಸದಿಂದ ಇರಲು, ಶೇಷಣ್ಣ ರಜನಿಯನ್ನು ,ಗಂಡನ ಮನೆಗೆ ಹೋಗಲು ಒತ್ತಾಯಿಸುತ್ತಾರೆ. ತನ್ನ ತಪ್ಪು ಅರಿತ ರಜನಿ ಅತ್ತಿಗೆಯಲ್ಲಿ ಕ್ಷಕ್ಷಮೆ ಕೋರಿ ಗಂಡನ ಮನೆಗೆ ತೆರಳುತ್ತಾಳೆ.
            ಇಂದಿನ ಹೆಣ್ಣು ಮಕ್ಕಳು ಎಲ್ಲಾ ರೀತಿಯ ಸವಲತ್ತು ಹೊಂದಿರಲು ಕಷ್ಟಪಡದೇ ಸಿಗುವ ಸುಖದ ಹಿಂದೆ ಹೋದಂತೆ, ಸಂಸಾರದಲ್ಲಿ ಏರಿಳಿತಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇರುವುದರಿಂದ, ಜೀವನದಲ್ಲಿ ಸೋಲು ಅನುಭವಿಸುತ್ತಾರೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದಂತೆ. ಕೊಟ್ಟ ಹೆಣ್ಣು ತವರುಮನೆಯ ವಿಷಯಕ್ಕೆ ತಲೆ ಹಾಕದೇ ಇದ್ದಹಾಗೆ. ಹೆಣ್ಣು ಮಗಳ ಸಂಸಾರದಲ್ಲಿ ಕೊಟ್ಟ ಮೇಲೆ, ತಂದೆತಾಯಿಯರೂ ತಲೆ ಹಾಕದಲ್ಲಿ ಎಲ್ಲರ ಜೀವನದಲ್ಲೂ ಸುಖ ಸಂತೋಷ ಶಾಂತಿ ತುಂಬಿರಬಹುದೆಂದು, ಶೇಷಣ್ಣ ತಮ್ಮ ಕ್ಲಬ್ ನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಭಾಷಣದಲ್ಲಿ ಹೇಳಿ ತಮ್ಮ ಮಾತನ್ನು ಮುಗಿಸುತ್ತಾ ಜನರ ಚಪ್ಪಾಳೆಗೂ ವಿದ್ಯಾಳ ಮನ್ನಣೆಗೂ ಪಾತ್ರರಾಗುತ್ತಾರೆ.
                     

Creative Writings
ತಪ್ಪಿನ ಅರಿವು