
News · December 15, 2025
ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಕರಾಡ ಸಮುದಾಯದ ಅಭ್ಯರ್ಥಿಗಳಿಗೆ ಅಭಿನಂದನೆಗಳು
ಶ್ರೀಮತಿ ನಯನಾ ಕಾನಕಾಜೆ, ಶ್ರೀಮತಿ ಸೌಭಾಗ್ಯಲಕ್ಷ್ಮಿ, ಶ್ರೀ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ
ಕುಂಬ್ಡಾಜೆ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಸಮಾಜದ ಮಹಿಳೆಯರಾದ ಏತಡ್ಕ ವಾರ್ಡ್‌ನಿಂದ ಜಯಗಳಿಸಿದ ಶ್ರೀಮತಿ ನಯನಾ ಕಾನಕಾಜೆ ಹಾಗೂ ಜಯನಗರ ವಾರ್ಡ್‌ನಿಂದ ಜಯಗಳಿಸಿದ ಶ್ರೀಮತಿ ಸೌಭಾಗ್ಯಲಕ್ಷ್ಮಿ (ಸೌಮ್ಯ) ಕಲ್ಲಕಳಂಬಿ ಇವರಿಗೆ ಕರಾಡ ವಿಶ್ವ ತಂಡದ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಅದೇ ರೀತಿ, ಪೈವಳಿಕೆ ಗ್ರಾಮ ಪಂಚಾಯತ್‌ನ ಸಜಂಕಿಲ ವಾರ್ಡ್‌ನಿಂದ ಜಯಗಳಿಸಿದ ಶ್ರೀ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಇವರಿಗೂ ಕರಾಡ ವಿಶ್ವ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಜನತೆಯ ವಿಶ್ವಾಸಕ್ಕೆ ಪಾತ್ರರಾಗಿ ಆಯ್ಕೆಯಾದ ಇವರುಗಳು ತಮ್ಮ ಸೇವೆ, ಪ್ರಾಮಾಣಿಕತೆ ಮತ್ತು ನಾಯಕತ್ವದ ಮೂಲಕ ಸಮಾಜ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲೆಂದು ಕರಾಡ ವಿಶ್ವ ತಂಡವು ಹಾರೈಸುತ್ತದೆ.

ಏತಡ್ಕ ವಾರ್ಡ್‌ನಿಂದ ಜಯಗಳಿಸಿದ ಶ್ರೀಮತಿ ನಯನಾ ಕಾನಕಾಜೆ

ಸಜಂಕಿಲ ವಾರ್ಡ್‌ನಿಂದ ಜಯಗಳಿಸಿದ ಶ್ರೀ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ

ಜಯನಗರ ವಾರ್ಡ್‌ನಿಂದ ಜಯಗಳಿಸಿದ ಶ್ರೀಮತಿ ಸೌಭಾಗ್ಯಲಕ್ಷ್ಮಿ (ಸೌಮ್ಯ) ಕಲ್ಲಕಳಂಬಿ
