Karada Vishwa

Article · August 17, 2026

ಶೇಷನಾಗನೇ ಹರಸು ನೀ

By ಗಾಯತ್ರಿಕೆ ನಾಗರಾಜ ಅಡ್ಕತ್ತೊಟ್ಟಿ

ಗಾಯತ್ರಿ ಕೆ ನಾಗರಾಜ್ ಅಡ್ಕತೊಟ್ಟಿ

ನಾರಾಯಣಗೆ ಶಯ್ಯೆಯಾಗಿಹ
ನಾಗರಾಜನೇ ಕದ್ರಿಸುತ
ನಮಿಸುವೆ ಶ್ರದ್ಧಾ ಭಕ್ತಿಯ ಶುದ್ಧದಿ
ನಮ್ಮೆಲ್ಲರನು ಹರಸೆನುತ

ಶ್ರಾವಣ ಮಾಸದ ಪಂಚಮಿ ತಿಥಿಯಲಿ
ವಿಶೇಷ ಪೂಜೆಯ ನಾಗೈವೆ
ದೋಷಗಳೆಲ್ಲವ ದೂರಿಕರಿಸಿ
ಸುಖ ಸಮೃದ್ಧಿಯ ಕರುಣಿಸಿ

ಅರಶಿನ ಸಿಂಗಾರದಿ ಶೃಂಗಾರ
ಹಾಲು ಸೀಯಾಳಗಳ ಅಭಿಷೇಕ
ಸಂಪಗೆ ಕೇದಗೆ ಪುಷ್ಪಗಳ
ಅರ್ಪಿಸುವೆ ಕೊಡು ಮಂಗಳ

ತ್ರೇತಾ ಯುಗದಿ ಲಕ್ಷ್ಮಣನಾಗಿ
ದ್ವಾಪರ ಯುಗದಿ ಬಲರಾಮನು
ಅವತಾರವೆತ್ತಿದ ಶೇಷನಾಗನೆ
ಪಾಪವ ನೀಗಿಸು ದಯಾಕರನೆ

Creative Writings