Karada Vishwa

Article · September 15, 2026

ಜೀವನದಾಟ ... ನಾಗಾಲೋಟ .

By ಜಯಶ್ರೀ ಕೆ. ಆರ್ ಭಟ್ . ಪಳ್ಳತಡ.್ಕ .

ಜಯಶ್ರೀ ಐಲುಕುಂಜೆ

ಕಣ್ಣು ಮುಚ್ಚಿ ತೆರೆಯುವುದರೊಳಗೆ ಬದುಕು ಮುಗಿದು ಹೋಗಿರುತ್ತದೆ......

ನಸುಕಿನ ಜಾವದ ನಸುಗತ್ತಲಿನಲಿ
ವಿಧ ವಿಧ ಸುಮಗಳು ವಿಕಸಿಸಲು /
ಆಗಸದಂಚಿಗೆ ಬಂದನು ನೇಸರ
ಬೆಳಕನು ಜಗಕೆ ಹರಡಿಸಲು /

ಬೆಳ್ಳಿಯ ಬೆಳಕೂ, ಏನದು ಥಳುಕೂ
ಕತ್ತಲನೋಡಿಸೊ ಕಿರಣಗಳೂ/
ಹಗಲಿರುಳೆನ್ನುತ ಕಾಲದ ಆಟ
ನಡುವಿಗೆ ಜನನವು ಮರಣಗಳೂ /

ನೋವೂ ನಲಿವೂ, ಸುಖವೂ ದುಃಖ
ಉರುಳಿತು ಸಮಯವು ಘಳಿಗೆಯೊಳು/
ನಾನೂ ನೀನೂ ಆಟಕೆ ಮಾತ್ರಾ
ದೇವರು ಆಡುವ ಆಟದೊಳು /

ಕಣ್ಗಳ ಮುಚ್ಚಿ ತೆರೆಯುವುದಷ್ಟೆ
ಮೂರೇ ಘಳಿಗೆಯ ಬಾಳಿನೊಳು /
ಮುಗಿದೇ ಹೋಗುವುದೆಲ್ಲವು ಕ್ಷಣದೊಳು
ಮಣ್ಣಾಗಿಯೆ ಬಿಡುವುದು ಮಣ್ಣಿನೊಳು /

Creative Writings