Karada Vishwa

Article · August 14, 2026

ತ್ರಿವರ್ಣ ಧ್ವಜ

_ವೀಣಾ ಎಂ ಭಟ್

ಜನ ಮನ ವಂದಿಪ ತ್ರಿವರ್ಣಧ್ವಜವ

ಮನೆ ಮನೆ ಮೇಲೆ ಏರಿಸುವ

ಭಾರತ ಮಾತೆಗೆ ಮನ್ನಣೆ ನೀಡುತಲಿ

ರಾಷ್ಟ್ರ ಗೀತೆ ಉಚ್ಚರಿಸುತಲಿ

ಜನನಿಯ ಚರಣದ ಧೂಳಿನ ಕಣದಲಿ

ನಿಸ್ವಾರ್ಥದಿಂದ ಒಂದಾಗೋಣ

ಹಿಮಚ್ಛಾದಿತ ಹಿಮಾಲಯ ಶಿಖರ

ಭಾರತಿ ದೇವಿಯ ಮುಕುಟ ಕಾಶ್ಮೀರ

ಹರಿಯುವ ಜುಳುಜಳು ಜಲದ ನಿನಾದ

ಕಾಣಲು ಸುಂದರಿ ನಮ್ಮೀ ವಸುಧ

ತುಷಾರದಿ ಬೆರೆತ ಸಸ್ಯ ಶ್ಯಾಮಲೆ

ನಳನಳಿಸುವ ಈ ಸುಮಗಳ ಕೋಮಲೆ

ಭಾರತೀಯರ ಹೆಮ್ಮೆಯ ನಾಡಿದು

ತವ ಶರಣೆಂಬೆನು ಪಾದಕೆ ಮಣಿದು

ಜಯ ಶುಭ ಜನನೀ ಜಯ ಹೇ

ಜಯ ನಿಸ್ವಾರ್ಥದ ಮಣಿಯೇ

ಜಯ ಜಯಕಾರವ ಪಾಡುವೇ

ಜಯ ಭಾರತಿ ದೇವಿಗೆ ಜೈ

Creative Writings