
Article · November 7, 2026
ಸೊಬಗಿನ ಸಿರಿ
By ಶ್ರೀದೇವಿ ಕಜಮಲೆ.
ಶ್ರೀದೇವಿ ಕಜಮಲೆ.
ಪ್ರಕೃತಿಯಲ್ಲಿನ ಸೊಬಗಿನ ಕೆಲವೊಂದು ವರ್ಣನೆ.
ಆ ರವಿ ಬರೆದನು ಬಾನಂಗಳದಲಿ ಬಣ್ಣದ ಚಿತ್ತಾರ
ಒಡಲಲಿ ಹುದುಗಿದ ಹಸಿರಿನ ಆಗರ ಭೂರಮೆ ಸಿಂಗಾರ
ಅರಳಿದ ಸುಮದಲಿ ಇಬ್ಬನಿ ಹನಿಹನಿ ಮುತ್ತಿನ ಸರಮಾಲೆ
ಮಾರುತ ಬೀಸಲು ತರುಲತೆ ಹಾಡಿತು ಜೋಗುಳದುಯ್ಯಾಲೆ
ಇನಿಯನ ಕಂಗಳು ಬೀರುವ ನೋಟಕೆ ನಾಚುತ ಮನದನ್ನೆ.
ಚೆಲುವೆಯ ಮೊಗದಲಿ ಹರುಷದ ಆ ಕ್ಷಣ ಕೆಂಪಾಯಿತು ಕೆನ್ನೆ
ಗುಡುಗಿನ ತಾಳಕೆ ಮಿಂಚುವ ಬೆಳಕಲಿ ನವಿಲಿನ ನರ್ತನವು
ತುಂತುರು ಮಳೆಹನಿ ಕಾಮನಬಿಲ್ಲಿಗೆ ರಂಗಿನ ಸಿಂಚನವು
Creative Writings
