Karada Vishwa

Article · May 2, 2026

ಸಂಪಿಗೆ

- ವಿದ್ಯಾ ಎಡಮಲೆ

ತೋಟದಿ ಮರವಿದೆ ಸಂಪಿಗೆ
ಗೆಲ್ಲನು ಚಾಚಿದೆ ಅಂಗಳಕೆ
ಚೆಂದದ ಮಾಲೆಯು ಮುಡಿಗೆ
ಬೇಗನೆ ಎದ್ದು ಕೊಯಿದವಗೆ.

ತಾನೇ ಮುಡಿದರೆ ಸಾಲದು ಅಲ್ಲವೆ
ಕೊಡಬೇಕಲ್ವೇ ಗೆಳತಿಗೆ
ಉಳಿದವರೆಲ್ಲಾ ಏಳುವ ಮೊದಲೆ
ನಾನೇ ಎದ್ದೆನು ಮೆಲ್ಲಗೆ

ಆಯ್ದ ಹೂಗಳ ಚೀಲದೊಳಿರಿಸೆ
ಹಂಚಿಬಿಟ್ಟೆ ತರಗತಿಗೆ 
ಸಂಪಿಗೆ ಪರಿಮಳ ಹರಡಿದ ತರಗತಿ
ತಲೆನೋವಾಯ್ತು ಟೀಚರಿಗೆ 

ದೂರದು ತಲುಪಿತು ಅಮ್ಮನಿಗೆ 
ಪೆಟ್ಟು ಬಿತ್ತು ಬೆನ್ನಿಗೆ
ಮರೆತು ಬಿಟ್ಟೆ ಸಂಪಿಗೆ
ಮನಸು ಹೋಯಿತು ಓದಿನ ಕಡೆಗೆ


Creative WritingsKids
ಸಂಪಿಗೆ