
Article · June 8, 2026
ಬೆಕ್ಕಿನ ಆಸೆ
✍️ ದಿವ್ಯಾ.ಶಿರಂತಡ್ಕ
ಕೊಳದ ಬಳಿಗೆ ಬಂತು ಒಂದು ಆಸೆಬುರುಕ ಬೆಕ್ಕು
ಸುತ್ತಮುತ್ತ ತಿರುಗಿ ಒಳಗೆ ಬಾಗಿಸಿತು ಕತ್ತು..
ಸಪ್ಪೆ ಬಾಯಿ ಹುಡುಕುತ್ತಿತ್ತು ತಿನ್ನಲೊಂದು ಮೀನು
ಅನ್ನ ಮೊಸರು ಇಷ್ಟು ದಿನ ಹೇಗೋ ತಿಂದೆ ತಾನು..
ಎಂದುಕೊಂಡು ಬೆಕ್ಕು ಕೊಳದ ಒಳಗೆ ನೋಡಲು
ನೀರ ಕಂಡು ದುಗುಡಗೊಂಡು ಭೀತಿ ಮೂಡಲು..
ಒಡಲ ತಣಿಸಲೆಂದು ಮೀನಿಗಾಸೆಪಟ್ಟರೆ
ಮುಳುಗಿ ಸಾವು ಖಚಿತ ನೀರಿಗಿಳಿದು ಬಿಟ್ಟರೆ..
ಅಯ್ಯಾ ದೇವ ಏನು ವಿಚಿತ್ರ ನಿನ್ನ ಲೀಲೆಯು
ಕೈಯ ತುತ್ತು ಬಾಯಿಗೆ ಬಾರದಂತ ಜಾಲವು..
Creative Writings
