Karada Vishwa

Article · September 17, 2026

ನಮಿಸುವೆವು ನಿನಗೆ ಕನ್ನಡಾಂಬೆಯೆ

By ರಾಧಾಕೃಷ್ಣ ಭಟ್;ಕುರುಮುಜ್ಜಿ

ರಾಧಾಕೃಷ್ಣ ಕುರುಮುಜ್ಜಿ

ಕಾಸರಗೋಡಿನ ಕನ್ನಡ ಭಾಷೆಯ ಸಂಸ್ಕೃತಿ, ಕಲೆಗಳು ಪ್ರಾಕೃತಿಕ ಸೌಂದರ್ಯದ ಕುರಿತು ಬರೆದ ಕವನ. ಧಾಟಿ---ಸಾಮವೇದಂ ನವಿಲುಣರ್ತಿಯ ಸ್ವಾಮಿಯೆ!

ನಮಿಸುವೆವು ನಿನಗೆ ಕನ್ನಡಾಂಬೆಯೆ
ನಿನ್ನ ಕಂದನನು ರಕ್ಷಿಸಮ್ಮ ತಾಯಿಯೆ !

ಕಾಸರಗೋಡಿನಲಿ ಸೊಗಸಿನ ತಾಣದಲಿ
ಸ್ಥಿರವಾಗಿ ನೆಲೆಸಮ್ಮ ಮಾತೆಯೆ
ತನುವಿದು ಕನ್ನಡ ಮನವಿದು ಕನ್ನಡ
ನಡೆ ಅದು ಕನ್ನಡ ನುಡಿಯದು ಕನ್ನಡ
ಈ ಮಣ್ಣಿನ ಕಣಕಣವು ಕನ್ನಡ
ಕನ್ನಡಿಗನ ಸರ್ವ‌ಸ್ವವು ಕನ್ನಡ |೧|

ಕನ್ನಡ ಭಾಷೆಯದು ಇಲ್ಲಿ ಉಳಿಯಲಿ
ಕನ್ನಡ ಸಂಸ್ಕೃತಿಯು ಇಲ್ಲಿ ಬೆಳೆಯಲಿ
ಕನ್ನಡದ ಜ್ಯೋತಿಯದು ಬೆಳಗಲು---ತಾಯೆ
ಬೆಳಕಾಗಿ ಬಾರಮ್ಮ ಹರಸಲು ಕಾಸರಗೋಡಿನಲಿ ನೆಲೆಸಲು
ಸಾಹಿತ್ಯದ ನಾಡಿದು ಸಾಹಿತಿಗಳ ಬೀಡಿದು
ಕಲೆಗಳಿಗೆ ಬೆಲೆಯು ನೆಲೆಯು ಇಲ್ಲಿ ಇರುವುದು | ೨|

ಕನ್ನಡ ಮಾತೆಯ ಮಮತೆಯ ಮಡಿಲು
ಸನಿಹದಿ ಕಾಣುತಿಹ ಸುಂದರ ಕಡಲು
ಏನೆಂದು ವರ್ಣೀಸಲಿ ತಾಯಿಯೇ ನಿನ್ನ
ಕನ್ನಡನಾಡಿನ ಸೊಬಗನು
ಪ್ರಕೃತಿಯು ನೀಡಿದ ಕೊಡುಗೆಯನ್ನು
ಈ ದಿವ್ಯ ಮಣ್ಣಿನ ಮಹಿಮೆಯನ್ನು
ಬೇಕಲಕೋಟೆಯದು ಯಾತ್ರಿಕರ ಸೆಳೆದಿಹುದು
ಎಲ್ಲವು ಇರುವದು ಈ ಮಣ್ಣಿನಲಿ |೩|

Creative Writings