
Article · March 21, 2026
ಮುಕ್ತಕಗಳು
- ಸಂಧ್ಯಾ ಕೊರೆಕ್ಕಾನ
೧ .
ಆಸೆಗಳು ನೂರಾರು ಇದ್ದರದು ಅದುಮಿಡುತ
ಹಾಸಿದರು ಹಾಸಿಗೆಯ ತಮ್ಮಕುಡಿಗಳಿಗೆ
ಬೀಸಿಬರೊ ಗಾಳಿಯದು ಹೊತ್ತೊಯ್ಯೆ ಅವರನ್ನ
ಘಾಸಿಗೊಂಡಿತುಯೆದೆಯು ಬಾಳಸಂಧ್ಯೆ
೨ .
ಮುತ್ತಿರುವ ಅಜ್ಞಾನ ಕಳೆಯಲಿಕೆ ಸುಜ್ಞಾನಿ
ಹತ್ತಿರವೆ ಇದ್ದರದು ಸೊಗಸಿಹುದು ತಾನೆ
ಕತ್ತಿಯನು ಸಾಣೆಹಿಡಿದರೆ ಹರಿತಗೊಳುವಂತೆ
ಚಿತ್ತಹರಿತವುಮಾಡೆ ಬಾಳಸಂಧ್ಯೆ
Creative Writings
