Karada Vishwa

Event · January 7, 2026

ಕರಾಡ ವಿಶ್ವ ವೆಬಿನಾರ್ ಸರಣಿ -33

1೦/01/2026ರ ಶನಿವಾರ ಸಂಜೆ 7.30ಕ್ಕೆ ; ವಿಷಯ : ಪತ್ರಿಕೋದ್ಯಮದ ರಸ ಪ್ರಸಂಗಗಳು ; ಸಂಪನ್ಮೂಲ ವ್ಯಕ್ತಿ : ಶ್ರೀಯುತ ನಿತ್ಯಾನಂದ ಪಡ್ರೆ

ಈ ಸರಣಿ ಕಾರ್ಯಕ್ರಮದ ಅಂಗವಾಗಿ 1೦/01/2026ರ ಶನಿವಾರ ಸಂಜೆ 7.30ಕ್ಕೆ ಪತ್ರಿಕೋದ್ಯಮದ ರಸ ಪ್ರಸಂಗಗಳು ಎನ್ನುವ ಅನನ್ಯ ವಿಷಯದ ಕುರಿತು ಶ್ರೀಯುತ ನಿತ್ಯಾನಂದ ಪಡ್ರೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ  off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/ykz-gpuu-tfj

ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
ಶ್ರೀಯುತ ನಿತ್ಯಾನಂದ ಪಡ್ರೆ - 
★ ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕು, ಪಡ್ರೆ ಗ್ರಾಮದ ಸಜಂಗದ್ದೆ ನಾರಾಯಣ ಭಟ್ -ಗಿರಿಜಾ ದಂಪತಿಯ ಮೂರನೆಯ ಮಗ.
★ ಜನನ 11-11-1957.
★ ಸ್ವರ್ಗ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ.
★ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಿಯುಸಿ, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಪದವಿ ಓದು.
★ ಸುಮಾರು ಮೂರೂವರೆ ದಶಕಗಳ ಕಾಲ ಉದಯವಾಣಿಯ ಸಂಪಾದಕೀಯ ವಿಭಾಗದ ವಿವಿಧ ಡೆಸ್ಕ್‌ಗಳಲ್ಲಿ ಕೆಲಸ ಮಾಡಿದ ಅನುಭವ.
★ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಖ್ಯಾತರಾಗಿದ್ದ ಹಿರಿಯ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯ, ಈಶ್ವರಯ್ಯ, ಎನ್. ಗುರುರಾಜ ಮುಂತಾದವರ ಮಾರ್ಗದರ್ಶನ.
★ ಉದಯವಾಣಿಯಲ್ಲಿ ಸುದ್ದಿ ಭಾಷಾಂತರವೂ ಸೇರಿದಂತೆ ಸಂಪಾದಕೀಯ ಪುಟದ ನಿರ್ವಹಣೆ. ಆಗಾಗ ಪ್ರಕಟವಾಗುತ್ತಿದ್ದ ವಿಶೇಷ ಪುರವಣಿಗಳು - ಸಾಪ್ತಾಹಿಕ ಪುರವಣಿ ವಿಭಾಗದ ನಿರ್ವಹಣೆ ಜವಾಬ್ದಾರಿ - ಅನುಭವ.
★ ಅಂದಿನಿಂದ ಇಂದಿನವರೆಗೆ ಪತ್ರಿಕೆಯಲ್ಲಿ ಪ್ರತಿದಿನ ಪ್ರಕಟವಾಗುವ ಪದ ಸಂಪದ‌ದ ರಚನೆ-ಪ್ರಸ್ತುತಿ.
★ ಉದಯವಾಣಿ ಬಳಗದ ಪತ್ರಿಕೆಗಳಲ್ಲಿ ಸಾವಿರ‌ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.
★ ಇತರ ಆಸಕ್ತಿ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ವ್ಯಕ್ತಿತ್ವ ವಿಕಸನ ಶಿಬಿರ ನಡೆಸುವುದು. ಪರೀಕ್ಷಾ ತಯಾರಿ ಬಗ್ಗೆ ತಿಳಿ ಹೇಳುವುದು. ಬರವಣಿಗೆ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ತರಬೇತಿಗಳಲ್ಲಿ ವಿಶೇಷ ಆಹ್ವಾನದ ಮೇರೆಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ.
★ ಸುಮಾರು 4 ದಶಕಗಳ ಕಾಲ ಬಿಡುವಾದಾಗೆಲ್ಲ ಪಿಯುಸಿಯ ಕಾಮರ್ಸ್ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಫೈನಾನ್ಸಿಯಲ್ ಅಕೌಂಟಿಂಗ್ ವಿಷಯದಲ್ಲಿ ತರಬೇತಿ-ಪಾಠ.
★  ಕೃತಿ ಪ್ರಕಟಣೆ: 'ಕಲಾ ಚಿಂತಕ ಈಶ್ವರಯ್ಯ' ಹೆಸರಿನ ಕೃತಿ ಕಾಂತಾವರ ಕನ್ನಡ ಸಂಘ‌ದಿಂದ ಪ್ರಕಟಗೊಂಡಿದೆ.
★ ಕೃಷಿಗೆ ಸಂಬಂಧಿಸಿದ ಸಂದರ್ಶನ ಲೇಖನಗಳು-ಪುಸ್ತಕ ವಿಮರ್ಶೆಯಲ್ಲಿ ಹೆಚ್ಚು ಒಲವು.
★ ಪ್ರಶಸ್ತಿ ಪುರಸ್ಕಾರ 
1. ರೋಟರಿ ನ್ಯೂಸ್ ಟ್ರಸ್ಟ್ ಚೆನ್ನೈ ಇವರಿಂದ ಪತ್ರಿಕಾ ರಂಗದ ಸಾಧನೆಗಾಗಿ ಅವಾರ್ಡ್ ಆಫ್ ಎಕ್ಸಲೆನ್ಸಿ ಪ್ರಶಸ್ತಿ.
2. ಬ್ರಹ್ಮಾವರ ಎಸ್ಎಂಎಸ್ ಇಂಗ್ಲೀಷ್ ಮೀಡಿಯಂ ಶಾಲೆಯಿಂದ ಪತ್ರಿಕೋದ್ಯಮ ಸೇವೆಗಾಗಿ ಪುರಸ್ಕಾರ.
3. ಕಾಂತಾವರ ಕನ್ನಡ ಸಂಘ ಮತ್ತು ಹಲವು ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ.
4. ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದಿಂದ ಉಪಾಧ್ಯಾಯ ಸಮ್ಮಾನ್ ಹೆಸರಿನ ರಾಜ್ಯಮಟ್ಟದ ಪ್ರಶಸ್ತಿ.
★ ಪತ್ನಿ ಶ್ಯಾಮಲಾ (ನಿವೃತ್ತ ಶಿಕ್ಷಕಿ) ಮಕ್ಕಳು-ಮೊಮ್ಮಕ್ಕಳೊಂದಿಗೆ ಮಣಿಪಾಲದ ಗಿರಿಜಾ ನಿವಾಸ‌ದಲ್ಲಿ ವಾಸ.
★ ನಗುಮೊಗದ, ಬಾಯ್ತುಂಬಾ ಮಾತನಾಡುವ ಸಹೃದಯಿ.


ಕರಾಡ ವಿಶ್ವ ವೆಬಿನಾರ್ ಸರಣಿ -33