Karada Vishwa

Event · July 21, 2025

ಕರಾಡ ಬ್ರಾಹ್ಮಣರ ಶ್ರೀ ಗುರುದರ್ಶನ ದಿನ - ಶೃಂಗೇರಿ ಶ್ರೀ ಮಠದಲ್ಲಿ

ದಿನಾಂಕ : 21-07-2025 , ಸೋಮವಾರ ; ಶ್ರೀ ದೇವರ ದರ್ಶನ, ಶ್ರೀ ಗುರುಗಳ ದರ್ಶನ , ಕರಾಡ ವಿಶ್ವ ಮೊಬೈಲ್ ಆಪ್- ಡಿಜಿಟಲ್ ಅಡ್ರೆಸ್ ಬುಕ್ - ವೆಬ್ಸೈಟ್ ಬಿಡುಗಡೆ , ಸಮಾಜ ಬಾಂಧವರ ಸಮ್ಮಿಲನ

ಪ್ರಿಯ ಸಮಾಜ ಬಾಂಧವರೇ,

ಪೂರ್ವನಿಶ್ಚಯದಂತೆ ವರ್ಷಂಪ್ರತಿ ಶೃಂಗೇರಿ ಶ್ರೀಮಠದಲ್ಲಿ ನಡೆಯುವ ಪರಮಪೂಜ್ಯ ಜಗದ್ಗುರು

ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಮತ್ತು ತತ್ಕರಕಮಲಸಂಜಾತರಾದ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಇದೇ ತಾ. 21-07-2025 ನೇ ಸೋಮವಾರ ಕರಾಡ ಬ್ರಾಹ್ಮಣ ಸಮಾಜ ಬಾಂಧವರ ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರೀ ಗುರುದರ್ಶನ ದಿನವನ್ನು ಶೃಂಗೇರಿ ಶ್ರೀಮಠದಲ್ಲಿ ಆಯೋಜಿಸಲಾಗಿದೆ.

ನಮ್ಮ ಸಮಾಜದ ಎಲ್ಲ ಬಾಂಧವರು ತಮ್ಮ ಕುಟುಂಬದವರೊಡಗೂಡಿ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಶ್ರೀ ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.


ಆಟಿಕುಕ್ಕೆ ಹರೀಶ ಭಟ್, ಅಧ್ಯಕ್ಷರು

ಕೋಳಿಕ್ಕಜೆ ಬಾಲಕೃಷ್ಣ ಭಟ್, ಸಂಚಾಲಕರು

ರಮಾನಂದ ಎಡಮಲೆ, ಕಾರ್ಯದರ್ಶಿ

ಕರಾಡ ಬ್ರಾಹ್ಮಣ ಸಮಾಜ ಶೃಂಗೇರಿ ಸಂಪರ್ಕ ಸಮಿತಿ

ಕರಾಡ ಬ್ರಾಹ್ಮಣರ ಶ್ರೀ ಗುರುದರ್ಶನ ದಿನ - ಶೃಂಗೇರಿ ಶ್ರೀ ಮಠದಲ್ಲಿ