
Article · October 29, 2026
ನಮ್ಮಮ್ಮ ಶಾರದೇಯ ದಾರಿ
ಸಂತೋಷ್ ಕುಮಾರ್ ನಡುಮನೆ
ಚಿಕ್ಕಮಗಳೂರಿನ ಸಿರಿಯ ಮಡಿಲಲಿ
ತುಂಗೆಯಾ ತೀರದ ತಂಪಿನ ನೆಲದಲಿ
ಋಷ್ಯಶೃಂಗ ಮುನಿಯ ತಪದ ನೆನಪಲಿ
ಶೃಂಗೇರಿಯೆಂಬ ಪುಣ್ಯದ ಸ್ಥಳದಲಿ
ವಿಭಂಡಕ ಮುನಿಯ ಸುತನ ಹೆಸರಿನಲಿ
ಶ್ರೀರಾಮನ ಜನನದ ಯಾಗದ ಪುಣ್ಯದಲಿ
ಪುತ್ರಕಾಮೇಷ್ಟಿಯ ಮಾಡಿದ ನೆನಪಲಿ
ಮುನಿಯ ಮಹಿಮೆಯ ನೆನೆವೆವು ಭಕ್ತಿಯಲಿ
ಆದಿ ಶಂಕರರು ಬಂದರು ಈ ನೆಲಕೆ
ಕಪ್ಪೆಗೆ ನೆರಳಾದ ನಾಗನ ಕರುಣೆಗೆ
ಶಾರದೆಯ ದಿವ್ಯ ಕೃಪೆಯ ಕಂಡರು ಮನಕೆ
ಜೀವದಯೆಯ ಪಾಠವ ಸಾರಿದರು ಜಗಕೆ
ದಕ್ಷಿಣಾಮ್ನಾಯದ ಮೊದಲನೆ ಪೀಠವು
ಶ್ರೀಚಕ್ರ ಸನ್ನಿಧಿ ಶಾರದೆಯ ನೆಲೆಯು
ಜ್ಞಾನವ ಬೆಳಗುವ ಪವಿತ್ರ ತಾಣವು
ಮೋಕ್ಷವ ನೀಡುವ ದಿವ್ಯದ ದಾರಿಯು
ಸುರೇಶ್ವರಾಚಾರ್ಯರು ಮೊದಲಿನ ಗುರುಗಳು
ಜ್ಞಾನದ ಗಂಗೆಯ ಹರಿಸಿದ ದೊರೆಗಳು
ವಿದ್ಯಾರಣ್ಯರ ಕೃಪೆಯು ಹರಿಯಲು
ವಿಜಯನಗರದ ವೈಭವ ಮೆರೆಯಲು
ಚಿನ್ನದ ಶಾರದೆಯ ಮೂರ್ತಿಯ ಕಾಂತಿ
ವಿದ್ಯಾಶಂಕರನ ಗುಡಿಯದೇ ಖ್ಯಾತಿ
ಕಂಡವರ ಮನದಿ ತುಂಬುವುದು ಶಾಂತಿ
ಕಲ್ಲಿನ ಕಲೆಯಿದು ಜಗಕೆ ವಿಖ್ಯಾತಿ
ಹನ್ನೆರಡು ರಾಶಿಯ ಕಂಬದ ಸಾಲು
ಸೂರ್ಯನ ಕಿರಣದ ಬೆಳಕಿನ ಮೇಲು
ತಿಂಗಳಿಗೊಂದೇ ರಾಶಿಯ ಆಟದ ಲೀಲು
ಶಿಲ್ಪಿಯ ಬುದ್ಧಿಗೆ ಬೆರಗಿನ ಚೆಲುವು
ತುಂಗೆಯ ಅಲೆಯಲಿ ಮೀನುಗಳ ಸಾಲು
ಮಂದಕ್ಕಿ ನೀಡುವ ಭಕ್ತರ ಮೇಳ
ದಾಳಿಗಳ ಬಿರುಗಾಳಿ ಬೀಸಿದ ಕಾಲ
ಮರಾಠರ ಕಾಟದ ನೋವಿನ ವೇಳ
ಸಚ್ಚಿದಾನಂದ ಗುರುಗಳು ತೆರಳಿ
ಕಾರ್ಕಳದಿ ನಿಂತರು ಧರ್ಮವ ಕಾಯ್ದು
ಟಿಪ್ಪುವಿನ ನೆರವು ದೊರೆತಾಗ ಮರಳಿ
ಶಾರದೆಯ ಪೀಠವು ಮೆರೆಯಿತು ಗೆದ್ದು
ಸರಸ್ವತಿ ಮಹಲಿನ ತಾಳೆಗರಿ ಜ್ಞಾನವು
ಇನಾಂ ಭೂಮಿಯ ದಾನದ ಮಾನ್ಯತೆ
ರಾಜರ ಬ್ರಿಟಿಷರ ಕೃಪೆಯ ಸಾಕ್ಷಿಯ ತಾಣವು
ಜ್ಞಾನದ ಭಂಡಾರ ಉಳಿದಿದೆ ಪವಿತ್ರತೆ
ಕಾಳಭೈರವ ಆಂಜನೇಯನ ಕಾವಲು
ಕಾಳಿ ದುರ್ಗೆಯ ರಕ್ಷಣೆಯ ಕಾವಲು
ವೇದಪಾಠದ ನಾದವು ಮೊಳಗಲು
ಅನ್ನದಾನದ ಸೇವೆಯು ತಲುಪಲು
ನವರಾತ್ರಿ ದರ್ಬಾರಿನ ರತ್ನದ ವೈಭವ
ಬಂಗಾರದ ಸಿಂಹಾಸನದ ಪ್ರಭಾ
ಭಾರತಿ ತೀರ್ಥರ ಗುರುಕೃಪೆ ನೆರಳು
ಹನ್ನೆರಡು ಶತಮಾನದ ಪವಿತ್ರ ಬೆಳಕು
ಮೌನಿಗೆ ಮಾತನು ನೀಡುವ ತಾಯಿ
ಮಂದಮತಿಗೆ ಜ್ಞಾನವ ಕೊಡುವಳು ತಾಯಿ
ಅಜ್ಞಾನದ ಕತ್ತಲೆಯನು ಕಳೆಯಮ್ಮ ತಾಯಿ
ಅಹಂಕಾರದ ಮೋಡವ ಸರಿಸಮ್ಮ ತಾಯಿ
ಬಂದ ಭಕ್ತರಿಗೆ ಕರುಣೆಯ ನೀಡು
ಮಕ್ಕಳ ವಿದ್ಯೆಗೆ ದಾರಿಯ ತೋರು
ಯುಗಯುಗ ಕಳೆದರೂ ಕೀರ್ತಿಯು ಬಾಳಲಿ
ಶೃಂಗೇರಿ ಶಾರದೆಯ ಕೃಪೆಯು ಇರಲಿ
