Karada Vishwa

Article · August 20, 2026

ಅಗಣಿತ..

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ

ಜಯಶ್ರೀ ಐಲುಕುಂಜೆ

ವಿಕಸಿತ ಸುಮದೊಳು ಅಗಣಿತ ಚೆಲುವೂ
ಘಮ ಘಮಿಸುವ ಚೆಲು ಸೌಗಂಧಾ /

ಪರಿ ಪರಿವರ್ಣದೊಳಿಹ ಸುಮ ರಾಶಿಗೆ
ಪ್ರಕೃತಿಯೊಳಿದೆ ಚೆಲುವಿನ ಬಂಧ/

ಬೆಳಗಿನ ಜಾವಕೆ ಅರಳುವ ಸುಮಗಳು
ಕಣ್ಮನ ಸೆಳೆಯುತ ಚೆಲುವಿಂದಾ /

ನೋಡಿದ ಕೂಡಲೆ ನೆನಪಿಗೆ ಬರುವುದು
ಗೋಕುಲ ನಂದನ ಗೋವಿಂದಾ /

ತೊಟ್ಟಿಲೊಳಗೆ ಆ ಕಂದ ಮುಕುಂದನು
ಮೃದು ಪಾದಗಳಾಡಿಸಿದಂತೆ/

ತಣ್ಣನೆ ಗಾಳಿಗೆ ತೂಗಿದ ಸುಮಗಳು
ಜಗವ ಮರೆತು ನಗುತಿಹುವಂತೇ /

Creative Writings
ಅಗಣಿತ..