
Article · October 18, 2026
ಪಾರದರ್ಶಕ ಪ್ರೀತಿ
By ಗಾಯತ್ರಿ ಕೆ ನಾಗರಾಜ ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ನನ್ನ ಇನಿಯ ನೀನು, ಪ್ರೀತಿಯ ಮೋಹಕ ಮಳೆ
ಏನೂ ಕೊರತೆ ಇಲ್ಲದೆ ಹರಿಸಿದೆ ಪ್ರೇಮದ ಎಳೆ.
ಸುಖ ದುಃಖಗಳ ನಡುವೆ ನೀನೇ ನನ್ನ ನೆರಳು,
ನಿನ್ನ ಅಗಾಧ ಪ್ರೀತಿಗೆ ಇಲ್ಲವೇ ಎಣೆಯು ಇಲ್ಲ ಹೋಲಿಕೆ.
ಮನಸ್ಸು ನಿನ್ನ ನೆನೆದರೆ ಸಾಕು ಕ್ಷಣದಲಿ,
ಕರೆ ಮಾಡುವೆ, ಇಲ್ಲವೇ ಬಂದು ನಿಲ್ಲುವೆ ಎದುರಲಿ.
ಯಾವ ಕಪಟವಿಲ್ಲದ ಪಾರದರ್ಶಕ ಮನಸು
ನನ್ನ ಕಣ್ಣೀರ ಕಂಡರೆ ಕರಗಿ ಹೋಗುವುದು .
ಆಲೋಚನೆ ತಿಳಿದವನೀನು,ಅಂತರಂಗದ ಸಖನು
ಮಾತು ಬಾರದ ಮುನ್ನವೇ ಅರ್ಥ ಮಾಡಿಕೊಳ್ಳುವವನು.
ಈ ಪ್ರೀತಿ ಕ್ಷಣಿಕವಲ್ಲ, ಇದು ಜನ್ಮ ಜನ್ಮದ ಬಂಧ,
ನೀನಿದ್ದರೆ ಸಾಕು, ಬದುಕು ಸದಾ ಆನಂದ.
ನೀನಿಲ್ಲದೆ ನಾನಿಲ್ಲ, ನೀನೇ ನನ್ನ ಉಸಿರು
ನಿನ್ನ ಪ್ರೀತಿಯ ದೋಣಿಯಲೇ ಸಾಗಿದೆ ನನ್ನ ಬದುಕು.
Creative Writings
