Karada Vishwa

Article · February 22, 2026

ಹೂವು

(ಪುಟ್ಟ ಕವನಗಳು) ಕವಯಿತ್ರಿ : ಶೈಲಜಾ ಭಟ್ ಕನಿಯಾಲ

                 (1)
ಸುಗಂಧಿ-
ನಿನ್ನ ಕೊಯ್ಯಲು ಬಂದ ಕೈಯ
ನನ್ನ ಮನವದು ತಡೆಯಿತು
ನೀನು ಸೂಸಿದ ಸುಗಂಧಕಿಂದು
ನನ್ನ ಹೃದಯವು ಮಿಡಿಯಿತು
               (2)
ಇರುವ ದಿನದ ಬದುಕಲ್ಲಿ
ದಿನವಿಡೀ ಹೂ ನಗೆಯ ಚೆಲ್ಲಿ
ಮನೆ ಮಾಡಿ ಮನದಲ್ಲಿ
ಮಾಯವಾಗದಿರು ಕ್ಷಣಮಾತ್ರದಲ್ಲಿ
              (3)
ಈ ನಿನ್ನ ಚೆಲುವು
ಮೂಡಿಸಿದೆ ನನ್ನಲ್ಲಿ ಒಲವು
ಸೋತ ಈ ಮನವು
ಕಳೆದು ಹೋಯಿತು ಕೆಲಕ್ಷಣವು
            (4)
ಮಗುವಿನಂತೆ ಮೊಗವು
ಕಪಟವಿಲ್ಲದ ನಗುವು
ನೀನಿರದೆ ದಿನವೂ 
ಪೂಜಿಸದು ಜಗವು
     

Creative Writings
ಹೂವು