Karada Vishwa

News · August 26, 2026

ಬೆಳ್ತಂಗಡಿ ಕರಾಡ ಭವನದಲ್ಲಿ ಋಗುಪಾಕರ್ಮ, ಹಾಗೂ ಕರಾಡ ಸುವರ್ಣ ಸಂಭ್ರಮದ ಸಿದ್ಧತೆ

ವರದಿ ಕೃಪೆ : ವಿಷ್ಣು ಭಟ್

ಆತ್ಮೀಯರೇ

ಕರಾಡ ಸಮಾಜ ಬೆಳ್ತಂಗಡಿ ಇದರ ಆಶ್ರಯದಲ್ಲಿ ಇಂದು ನಮ್ಮ ಕರಾಡ ಭವನ ದಲ್ಲಿ ಋಗುಪಾಕರ್ಮ ಕಾರ್ಯಕ್ರಮವು ನೆರವೇರಿತು. ಈ ಸಂದರ್ಭದಲ್ಲಿ ಕರಾಡ ಸುವರ್ಣಸಂಭ್ರಮ ಸಮಿತಿ ಅಗಲ್ಪಾಡಿ ಇದರ ಪದಾಧಿಕಾರಿಗಳು ಬಂದು ಮುಂದೆ ನಡೆಯಲಿರುವ ಕರಾಡ ಸಂಭ್ರಮ ಸಮಿತಿಯ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು. ಇದಕ್ಕೆ ಸಂಬಂಧಪಟ್ಟಂತೆ ಒಂದು ಕಾರ್ಯಕ್ರಮವನ್ನು ನಮ್ಮ ಬೆಳ್ತಂಗಡಿ ವಲಯದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬೆಂಗ್ರೋಡಿ ವಿಷ್ಣು ಭಟ್ ಮತ್ತು ಕಾರ್ಯದರ್ಶಿ ಪ್ರಕಾಶ್ ಭಟ್ ಇವರು ಮತ್ತು ಸಂಘದ ಇತರ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

CommunityHeritage
ಬೆಳ್ತಂಗಡಿ ಕರಾಡ ಭವನದಲ್ಲಿ ಋಗುಪಾಕರ್ಮ, ಹಾಗೂ ಕರಾಡ ಸುವರ್ಣ ಸಂಭ್ರಮದ ಸಿದ್ಧತೆ