Karada Vishwa

Article · July 14, 2026

ವ್ಯಾಮೋಹ....

--ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

ಬಹು ಮೌಲ್ಯಯುತವಿಹುದು ಈ ಹಳದಿ ಲೋಹ

ಜನರಿಗೋ ಇದರಲ್ಲಿ ಎಲ್ಲಿರದ ಮೋಹ

ಎಷ್ಟು ಇದ್ದರು ಸಾಲದೆನ್ನುವಾ ದಾಹ

ಕಳ್ಳತನದಿಂದಾದರೂ ಮಾಡುವರು ಸ್ವಾಹಾ

ಕೈಬೆರಳು ಕಾಲ್ಬೆರಳು ಎಲ್ಲೆಡೆಯು ಒಡವೆ

ಇದು ಶಾಶ್ವತವೆ ಹೇಳು ಉಳಿಯುವುದೇ ದೃಢವೆ?

ಈ ಜೀವ ಜೀವನವೆ ನಶ್ವರವು ಎಲ್ಲ

ತಿಳಿದರೂ ವ್ಯಾಮೋಹ ಬಿಡುತಿಲ್ಲವಲ್ಲ!

ತೂಕ ಎಷ್ಟಿದ್ದರೂ ಕೊರಳಲ್ಲಿ ಧರಿಸಿ

ವಿಜ್ರಂಭಿಸುವೆವಲ್ಲ ಸಂತಸವ ಭರಿಸಿ

ಏನು ಮೋಹವೊ ಏನೋ ಏನೊಂದ ಕಾಣೆ

ಬೆಳಗಾಗೆ ಏಳುವುದೆ ದೃಢವಿಲ್ಲ ತಾನೇ!

ಹೆಚ್ಚಿದ್ದರೇ ಕಳ್ಳಕಾಕರದು ಕನ್ನ

ಇತಿಮಿತಿಯೊಳಿದ್ದರೆ ನೋಡಲಿಕು ಚೆನ್ನ!

Creative Writings