
Article · August 19, 2026
ಗೋವಿನ ನಿರಂತರ ಸೇವೆಯ ಅವಕಾಶಕ್ಕಾಗಿ (BVSc & AH)
By ಪ್ರವೀಣ,ಪೊಸವಳ್ಯ ಬೆಲ್ಲ
ಪ್ರವೀಣ ಪೊಸವೊಳ್ಯ ಬೆಲ್ಲ.
(BVSc & AH) ಪಶು ವೈದ್ಯಕೀಯ ಪದವಿಯ ಮಾಹಿತಿ....
ಮಾನವನಿಗೆ ಅನಾರೋಗ್ಯವಾದಾಗ ವೈದ್ಯರ ಸಲಹೆ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಮಾನವನ ಬೇರೆ ಬೇರೆ ಭಾಗಗಳಿಗೂ ಅಥವಾ ಅಂಗಗಳನ್ನು ಆಧರಿಸಿ ವೈದ್ಯರು ಇರುತ್ತಾರೆ. ಉದಾಹರಣೆಗೆ ಮಕ್ಕಳ ತಜ್ಞರು, ಹಲ್ಲಿನ ವೈದ್ಯರು, ಕಣ್ಣಿನ ತಜ್ಞರು ಇತ್ಯಾದಿ ಹೀಗೇ ತಜ್ಞ ವೈದ್ಯರ ಸಾಲುಗಳೇ ಇವೆ.
ಭೂಮಿಯಲ್ಲಿ ನಮ್ಮಂತೆಯೇ ಪ್ರಾಣಿಗಳಿಗೆ ಅನಾರೋಗ್ಯವಾದಾಗ ನೆನಪಾಗುವ (BVSc & AH) ವೇಟರ್ನರಿ ಡಾಕ್ಟರ್. ಗ್ರಾಮೀಣ ಜನರು ಗೋ- ಡಾಕ್ಟರ್ ( ಗೋವಿನ ಡಾಕ್ಟರ್) ಅಂತ ಸಾಮಾನ್ಯವಾಗಿ ಕರೆಯುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಈ ವೈದ್ಯರು ಗೋವುಗಳ ಆರೋಗ್ಯ ಸಮಸ್ಯೆ, ಮನೆಯ ಸಾಕು ಪ್ರಾಣಿಗಳ ಸಮಸ್ಯೆ , ಮಾತ್ರವಲ್ಲ ಕಾಡು ಪ್ರಾಣಿಗಳ ಕುರಿತಾಗಿಯೂ ಅಧ್ಯಯನ ಮಾಡಿರುತ್ತಾರೆ. ದೇಶದಲ್ಲಿ ಹೈನುಗಾರಿಕೆ ಮುಂಚೂಣಿಯಲ್ಲಿ ಇರುವುದರಿಂದ ವೆಟರ್ನರಿ ವೈದ್ಯರ ಅತ್ಯಗತ್ಯ ತುಂಬಾ ಇದೆ.
ಗೋವಿನ ನಿರಂತರ ಸೇವೆಯ ಅವಕಾಶಕ್ಕಾಗಿ (BVSc & AH):
ಇತ್ತೀಚಿಗಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ದನ ಸಾಕುವ ಪದ್ದತಿ ಕಡಿಮೆಯಾದರೂ , ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಮತ್ತು ಇತರ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.
ಆದ್ದರಿಂದ ಪಶು ವೈದ್ಯ ಪದವಿ ಅಧ್ಯಯನ ಮಾಡಿದವರಿಗೆ ತುಂಬಾ ಅವಕಾಶಗಳು ಇವೆ. ಪಶು ವೈದ್ಯರು ಹೆಚ್ಚಾಗಿ ಸರ್ಕಾರಿ ವಲಯದ ಉದ್ಯೋಗಲ್ಲಿಯೇ ಪಶು ವೈದ್ಯರಾಗಿ ವೃತ್ತಿಪರರಾಗಿ, ಸಮಾಜಕ್ಕೆ ಅವರು ಗೋ ಮಾತೆಗಾಗಿ ತಮ್ಮ ಜೀವನದುದ್ದಕ್ಕೂ ಗೋ ಸೇವೆ ಮಾಡುತ್ತಾರೆ.
ಪದವಿ ಪೂರ್ವ ವಿಜ್ಞಾನ ವಿಭಾಗದ ಶಿಕ್ಷಣದ ನಂತರ ನಿಗದಿತ ಪರೀಕ್ಷೆಗಳ ಮೂಲಕ ಕಟ್ ಆಫ್ ಅಂಕಗಳ ಆಧಾರದಲ್ಲಿ ಈ ಕೋರ್ಸ್ ಗಳಿಗೆ ಸೀಟ್ ಹಂಚಿಕೆಯಾಗುತ್ತವೆ . ಪದವಿ ಮತ್ತು ತರಬೇತಿ ಸೇರಿ ಸುಮಾರು ೫ ವರ್ಷಗಳ ಅವಧಿಯಲ್ಲಿ ಪಶು ವೈದ್ಯಕೀಯ ಪದವಿಯನ್ನು ಪಡೆಯಬಹುದಾಗಿದೆ. ಪಶು ವೈದ್ಯಕೀಯ ಪದವಿಯ ನಂತರ ಸ್ನಾತಕೋತ್ತರ ಪದವಿಯಾದ MVsc &AH ನ್ನು ಅಧ್ಯಯನ ಮಾಡಬಹುದು.
ಮುಂದಿನ ದಿನಗಳಲ್ಲಿ ಪ್ರತಿ ವರ್ಷ ನಮ್ಮ ಸಮುದಾಯದಿಂದ ಒಂದೆರಡು ವಿದ್ಯಾರ್ಥಿಗಳು ಪಶು ವೈದ್ಯಕೀಯ ಪದವಿ ಪಡೆಯಲು ಪ್ರಯತ್ನಿಸಿ ,ಪಶು ವೈದ್ಯಕೀಯ ಪದವಿ ಪಡೆದು
ನಮ್ಮವರೇ "ವೆಟರ್ನರಿ ಡಾಕ್ಟರ್"ಆಗಿ ಬರಲಿ ಎಂದು ನಮ್ಮ ನಿಮ್ಮೆಲ್ಲರ ಆಶಯವಾಗಲಿ....
- ಪ್ರವೀಣ ಪೊಸವೊಳ್ಯ ಬೆಲ್ಲ. (9449448912)
