
News · August 27, 2026
ಶ್ರಾವಣ ಮಾಸದ ಪ್ರಯುಕ್ತ ಮಾತೆಯರಿಂದ ಕುಂಕುಮಾರ್ಚನೆ
ದಿನಾಂಕ : 06-09-2026ದಂದು ಸ್ಥಳ : ಕೋಡಣಕಟ್ಟೆಯ ಶ್ರೀ ವಿನಾಯಕ ದೇವರು ಮತ್ತು ಶ್ರೀ ಅರುಣಾಂಬಾ ದೇವಿಯ ದೇವಸ್ಠಾನ
ಎಲ್ಲರಿಗೂ ನಮಸ್ಕಾರಗಳು.
ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಮಾಜದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ದಿ. 06-09-2026 ಭಾನುವಾರದಂದು ಮಾತೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಕೋಡಣಕಟ್ಟೆಯ ಶ್ರೀ ವಿನಾಯಕ ದೇವರು ಮತ್ತು ಶ್ರೀ ಅರುಣಾಂಬಾ ದೇವಿಯ ದೇವಸ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10:30 ರಿಂದ ಪ್ರಾರಂಭವಾಗಲಿದೆ. ಭಾಗವಹಿಸುವ ಮಾತೆಯರೆಲ್ಲರೂ ಕುಂಕುಮ ಮತ್ತು ಅನುಕೂಲದ ತಟ್ಟೆಯೊಂದಿಗ ಅರ್ಧ ಗಂಟೆ ಮುಂಚಿತವಾಗಿ ಹಾಜರಿರಲು ಕೋರಿದೆ. ಮಧ್ಯಾಹ್ನ ಎಲ್ಲರಿಗೂ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ.
ಭೋಜನದ ನಂತರ ಲಯನ್ಸ್ ಕ್ಲಬ್ ಸಿರ್ಸಿ ಮಾತೆಯರಿಂದ ಭಜನಾ ಕಾರ್ಯಕ್ರಮವಿದ್ದು,ನಮ್ಮ ಸಮಾಜದ ವತಿಯಂದ ಅರಿಶಿನ ಕುಂಕುಮ ಕಾರ್ಯಕ್ರಮವಿರುತ್ತದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಎಲ್ಲಾ ಬ್ರಾಹ್ಮಣ ಸಮಾಜದ ಮಾತೆಯರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಕೋರಿದೆ.
ಇಂತಿ,
ಅಧ್ಯಕ್ಷರು/ಕಾರ್ಯದರ್ಶಿ
ಪ್ರದೇಶ ಕರ್ಹಾಡೆ ಸಮಾಜ ಸಿರಸಿ
ವಿ.ಸೂ-
ಕುಂಕುಮಾರ್ಚನೆಗೆ ಭಾಗವಹಿಸುವ ಮಾತೆಯರು ಒಂದು ದಿನ ಮಂಚಿತವಾಗಿ ತಿಳಿಸಲು ಕೋರಿದೆ.
ತರಬೇಕಾದ ಸಾಮಾಗ್ರಿಗಳು- ಕುಂಕುಮ, ಅರಶಿಣ, ಅಕ್ಷತೆ, ಹೂವು, ಹಣ್ಣು, ದೀಪ, ಗಜ್ಜೆವಸ್ತ್ರ, ಹಲಗಾರತಿ, ಬತ್ತಿ, ಎಲೆ, ಅಡಿಕೆ, ಕೌಳಿಗೆಸೌಟು, ಊದುಬತ್ತಿ, ಶ್ರೀ ಚಕ್ರದ ಪಟ ಇದ್ದಲ್ಲಿ.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.
ಸಂಪರ್ಕ,
1.ದತ್ತಾತ್ರೇಯ ನಾಡಿಗ್,8550068691
2.ವಿನಾಯಕ ರಿಂಗೆ,9019626255
3.ವೀಣಾ .ದ.ನಾಡಿಗ್,9880231491
4.ರಘು, ಎಂ,ಸ್ವಾದಿ,9980315610
