
Article · November 3, 2026
ಪೂಜೆ
By ಗಾಯತ್ರಿ ನಾಗರಾಜ, "ಕೃಷ್ಣಗಾನಂ "
ಗಾಯತ್ರಿ ಕೆ ಅಡ್ಕತೊಟ್ಟಿ
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆಯ ಪೂಜೆ
ಭಾರತಾಂಬೆಯ ಪೂಜೆ ವಿಧವಿಧದಿ ಮಾಡಲು
ಉತ್ಸುಕರು ನಿಂದಿಹರು ಭಕುತಿಯಲಿ
ಪೂಜೆಗೆ ಬೆಳಗುವ ದೀಪಗಳ ಸಾಲಿನಲಿ
ಕನ್ನಡದ ಹಣತೆಯಿದೆ ಬೆಳಗುತಲಿ.
ಹಣತೆಯ ದಾರವದು ಪಂಪನ ಕಾವ್ಯ
ರನ್ನ-ಜನ್ನ-ರಾಘವಾಂಕ-ಹರಿಹರರ ಜ್ಞಾನದ ಎಣ್ಣೆ
ಬಸವ-ಅಕ್ಕ-ಅಲ್ಲಮರ ವಚನಗಳ ಸಾರದ ಬತ್ತಿ
ಕುವೆಂಪು-ಬೇಂದ್ರೆ-ಕಾರಂತರ ಕಾವ್ಯಗಳಾಗರದ ಮಣ್ಣು
ದಾರ-ಎಣ್ಣೆ-ಬತ್ತಿ-ಮಣ್ಣು ಬೆರೆತು ಮೂಡಿದ ದಿವ್ಯ ಕಾಂತಿಯಲಿ,
ಭಾರತಾಂಬೆಯ ಪೂಜಾ ಸಾಲಿನಲ್ಲಿ ಮೊದಲ ದೀಪವಾಗಿ ನಿಂದಿಹುದು ಭಕ್ತಿಯಲಿ,
ಚೆನ್ನ ನಗುವಿನ ಹೊಳಪಿನಲಿ, ಹೊನ್ನು ಬೆಳಕಿನ ಸೊಬಗಿನಲಿ,
ಮಣ್ಣಿಂದ ಬಂದು ಮಣ್ಣನ್ನೇ ಬೆಳಗುವ ನಿತ್ಯದ ಜ್ಯೋತಿಯಲಿ.
Creative Writings
