
Article · August 21, 2026
ಬಳಕೆ..
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ರಾಜಕೀಯದ ಒಳಗೆ
ಹಲವು ವಿಧ ಮಂದಿ
ಒಬ್ಬರಿಂದೊಬ್ಬರಿಗೆ
ದ್ವೇಶವನು ಹೊಂದಿ
ಮೇಲೇರಿದವನ ಕಾಲ
ಎಳೆದು ಕೆಳಗಿಳಿಸಿ
ತಾವೇ ಮೇಲೇರುವರು
ಬಿದ್ದವನ ಬಳಸಿ /
ಕೆಲವೊಮ್ಮೆ ಸಂಬಂಧ
ಸ್ನೇಹವೂ ಹಳಸಿ
ಅಧಿಕಾರದಿಂದಿಳಿಸಿ
ಕೊಡುವರು ಮನೆಗೆ ಕಳಿಸಿ /
Creative Writings
